ಗಲ್ಫ್

ಮಕ್ಕಾದ ಮಸೀದಿ ಮೇಲೆ ಕ್ರೇನ್ ಕುಸಿತ: ಸಾವಿನ ಸಂಖ್ಯೆ 107ಕ್ಕೆ ಏರಿಕೆ; ಇಬ್ಬರು ಭಾರತೀಯರ ಸಾವು; 238 ಕ್ಕೂ ಅಧಿಕ ಜನರಿಗೆ ಗಾಯ

Pinterest LinkedIn Tumblr

Crane collapse Makkah_sept 12_2015-014

ರಿಯಾಧ್ (ಸೌದಿ ಅರೇಬಿಯಾ): ಹಜ್ ಯಾತ್ರಿಕರ ಪವಿತ್ರ ಸ್ಥಳ ಮೆಕ್ಕಾದ ಮುಖ್ಯ ಮಸೀದಿ ‘ಮಸ್ಜಿದ್ ಅಲ್ ಹರಾಮ್’ನಲ್ಲಿ ಸಂಭವಿಸಿದ ದುರಂತಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ 107ಕ್ಕೆ ಏರಿದ್ದು, ಮೃತ ಪಟ್ಟವರಲ್ಲಿ ಇಬ್ಬರು ಭಾರತೀಯರು ಸೇರಿದ್ದಾರೆ ಎಂದು ಶನಿವಾರ ತಿಳಿದುಬಂದಿದೆ.

ಮೆಕ್ಕಾದಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ 238ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

Crane collapse Makkah_sept 12_2015-001

Crane collapse Makkah_sept 12_2015-002

Crane collapse Makkah_sept 12_2015-003

Crane collapse Makkah_sept 12_2015-004

Crane collapse Makkah_sept 12_2015-005

Crane collapse Makkah_sept 12_2015-006

Crane collapse Makkah_sept 12_2015-007

Crane collapse Makkah_sept 12_2015-008

Crane collapse Makkah_sept 12_2015-009

Crane collapse Makkah_sept 12_2015-010

ವರ್ಷಗಳು ಕಳೆದಂತೆ ಹಜ್ ಗೆ ಆಗಮಿಸುವ ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಸೌದಿ ಅಧಿಕಾರಿಗಳು ಮಸೀದಿಯ ಹೊರ ಆವರಣ 4ಲಕ್ಷ ಚದರ ಮೀ. ಪ್ರದೇಶದಲ್ಲಿ ವಿಸ್ತರಣೆ ಮಾಡುವ ಸಲುವಾಗಿ ಮಸೀದಿ ಸುತ್ತ ಹಲವಾರು ಕ್ರೇನ್ ಗಳನ್ನು ಅಳವಡಿಸಿ ಮಸೀದಿಯಲ್ಲಿ ನಿರ್ಮಾಣ ಕಾಮಗಾರಿಯನ್ನು ಭರದಿಂದ ನಡೆಸುತ್ತಿದ್ದರು. ಈ ವೇಳೆ ಕ್ರೇನ್ ವೊಂದು ಕುಸಿದು ಮಸೀದಿಯ ಕೆಳ ಅಂತಸ್ತಿಗೆ ಬಿದ್ದಿದೆ. ಭಾರಿ ಗಾಳಿ, ಮಳೆಯೇ ಈ ದುರ್ಘಟನೆಗೆ ಕಾರಣ ಎಂದು ಅಲ್ಲಿನ ಪೊಲೀಸ್ ಇಲಾಖೆ ತನ್ನ ಟ್ವಿಟರ್ ಅಕೌಂಟ್ ನಲ್ಲಿ ಹೇಳಿಕೊಂಡಿದೆ.

ಮಸೀದಿಯಲ್ಲಿ ಸಂಭವಿಸಿದ ದುರ್ಘಟನೆಯ ರಕ್ತಸಿಕ್ತ ಮೃತ ದೇಹಗಳು ಚೆಲಾಪಿಲ್ಲಿಯಾಗಿ ಬಿದ್ದಿರುವ ಚಿತ್ರಗಳು ಇದೀಗ ಸಾಮಾಜಿಕ ತಾಣಗಳಾದ್ಯಂತ ಹರಿದಾಡುತ್ತಿವೆ.

Crane collapse Makkah_sept 12_2015-011

Crane collapse Makkah_sept 12_2015-012

Crane collapse Makkah_sept 12_2015-013

Crane collapse Makkah_sept 12_2015-015

Crane collapse Makkah_sept 12_2015-016

Crane collapse Makkah_sept 12_2015-017

Crane collapse Makkah_sept 12_2015-018

Crane collapse Makkah_sept 12_2015-020

Crane collapse Makkah_sept 12_2015-021

Crane collapse Makkah_sept 12_2015-022

ಘಟನೆ ನಾನು ಸ್ಥಳದಲ್ಲೇ ಇದ್ದೇ. ಸ್ಥಳದಲ್ಲಿ ಭಾರಿ ಮಳೆ ಹಾಗೂ ಗಾಳಿ ಇತ್ತು. ಈ ವೇಳೆ ಇದ್ದಕ್ಕಿದ್ದಂತೆ ಕ್ರೇನ್ ವೊಂದಕ್ಕೆ ಸಿಡಿಲು ಬಡಿದಿತು. ಇದರಿಂದಾಗಿ ಕ್ರೇನ್ ಕೆಳಗೆ ಕುಸಿದು ಬಿತ್ತು ಎಂದು ಪ್ರತ್ಯಕ್ಷದರ್ಶಿ ಅಬ್ದೆಲ್ ಅಜಿಜ್ ನಕೂರ್ ಎಂಬುವವರು ಹೇಳಿದ್ದಾರೆ.

ಘಟನೆ ಕುರಿತಂತೆ ಈಗಾಗಲೇ ಪ್ರತಿಕ್ರಿಯೆ ನೀಡಿರುವ ಸೌದಿ ವಿದೇಶಾಂಗ ಸಚಿವ ಪ್ರಿನ್ಸ್ ಸೌದ್ ಅಲ್ ಫೈಸಲ್ ಅವರು, ಘಟನೆ ಕುರಿತಂತೆ ಅಧಿಕಾರಿಗಳಿಗಳೊಂದಿಗೆ ಸ್ಪಷ್ಟನೆ ನೀಡುವಂತೆ ಸೂಚನೆ ನೀಡಿದ್ದು, ತನಿಖೆ ಆದೇಶಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದ್ದು. ಪರಂಪರೆ ಸಂಸ್ಕೃತಿ ಬಗ್ಗೆ ಅಧಿಕಾರಿಗಳಿಗೆ ನಿರ್ಲಕ್ಷ್ಯ. ಯಾತ್ರಾರ್ಥಿಗಳ ಆರೋಗ್ಯ ಹಾಗೂ ಸುರಕ್ಷೆಯ ಬಗ್ಗೆ ಅವರು ಚಿಂತಿಸುವುದಿಲ್ಲ ಎಂದು ಮೆಕ್ಕಾಗೆ ಸೇರಿದ ಇಸ್ಲಾಮಿಕ್ ಹೆರಿಟೇಜ್ ರಿಸರ್ಜ್ ಫೌಂಡೇಶನ್ ನ ಸಹ ಸಂಸ್ಥಾಪಕ ಇರ್ಫಾನ್ ಅಲ್ ಅಲಾವಿ ಆರೋಪ ವ್ಯಕ್ತಪಡಿಸಿದ್ದಾರೆ.

ಸಹಾಯವಾಣಿ ಸಂಖ್ಯೆಗಳು ಈ ಕೆಳಗಿನಂತಿವೆ
00966125458000/00966125496000
ಸೌದಿಯೊಳಗಿನ ಯಾತ್ರಿಕರಿಗಾಗಿರುವ ಉಚಿತ ಸಹಾಯವಾಣಿ ಸಂಖ್ಯೆ

8002477786

Write A Comment