ರಾಷ್ಟ್ರೀಯ

ವೀಸಾ ರಹಿತ ಪಾಕ್, ಬಾಂಗ್ಲಾದ ಹಿಂದೂ ನಿರಾಶ್ರಿತರಿಗೆ ಭಾರತದಲ್ಲಿರಲು ಅನುಮತಿ

Pinterest LinkedIn Tumblr

refugeesನವದೆಹಲಿ: ಯುರೋಪ್ ಒಕ್ಕೂಟದಲ್ಲಿ ಸಿರಿಯಾ ನಿರಾಶ್ರಿತರ ಬಿಕ್ಕಟ್ಟು ಉಂಟಾಗಿದ್ದರೆ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತ ಹಿಂದೂ ನಿರಾಶ್ರಿತರಿಗೆ ಆಶ್ರಯ ನೀಡಲು ಭಾರತ ಕ್ರಮ ಕೈಗೊಂಡಿದೆ.

ವೀಸಾ ಇಲ್ಲದೆ ಭಾರತದಲ್ಲಿರಲು ಪಾಕಿಸ್ತಾನ ಹಾಗೂ ಬಾಂಗ್ಲಾದ ಅಲ್ಪಸಂಖ್ಯಾತ ಹಿಂದೂಗಳಿಗೆ ಅನುಮತಿ ನೀಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರ್ಧರಿಸಿದೆ. ಡಿಸೆಂಬರ್ 31 2014 ರಲ್ಲಿ ಭಾರತಕ್ಕೆ ವೀಸಾ ಇಲ್ಲದೇ ಬಂದಿದ್ದ ಬಾಂಗ್ಲಾ, ಪಾಕ್ ಅಲ್ಪಸಂಖ್ಯಾತರಿಗೆ ಪಾಸ್ ಪೋರ್ಟ್ ಕಾಯ್ದೆಯಿಂದ  ವಿನಾಯಿತಿ ನೀಡಲು ಭಾರತ ಸರ್ಕಾರ ನಿರ್ಧರಿಸಿದೆ. ಪಾಸ್ ಪೋರ್ಟ್ ಕಾಯ್ದೆ ಪ್ರಕಾರ ಬಾಂಗ್ಲಾ ಹಾಗೂ ಪಾಕಿಸ್ತಾನದ ನಾಗರಿಕರು ಪಾಸ್ ಪೋರ್ಟ್, ವೀಸಾ ರಹಿತವಾಗಿ ಭಾರತಕ್ಕೆ ಪ್ರವೆಶಿಸುವಂತಿಲ್ಲ, ಆದರೆ ಈ ನಿಯಮಗಳಿಂದ ಹಿಂದೂ ಅಲ್ಪಸಂಖ್ಯಾತರಿಗೆ ವಿನಾಯಿತಿ ನೀಡಲಾಗಿದೆ.

ವೀಸಾ ಅವಧಿ ಮುಕ್ತಾಯಗೊಂಡರೂ ಸಹ ಅಲ್ಪಸಂಖ್ಯಾತರು ಭಾರತದಲ್ಲೇ ಇರಲು ಮಾನವೀಯ ನೆಲೆಯಲ್ಲಿ ಭಾರತ ಸರ್ಕಾರ ನಿರ್ಧಾರ ಕೈಗೊಂಡಿದೆ. ಪಾಕಿಸ್ತಾನ, ಬಾಂಗ್ಲಾ ದೇಶದಲ್ಲಿರುವ ಅಲ್ಪಸಂಖ್ಯಾತರಾದ ಹಿಂದೂ, ಸಿಖ್, ಜೈನ್, ಪಾರ್ಸಿ, ಬೌದ್ಧರಿಗೆ ಭಾರತ ಸರ್ಕಾರದ ನಿರ್ಧಾರದಿಂದ ಅನುಕೂಲವಾಗಲಿದೆ.

ಪಾಕಿಸ್ತಾನ, ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿರುವ ಅಲ್ಪಸಂಖ್ಯಾತರ ಸಂಖ್ಯೆ ನಿಖರವಾಗಿ ತಿಳಿದಿಲ್ಲವಾದರೂ, ಅಂದಾಜಿನ ಪ್ರಕಾರ, ಎರಡು ಲಕ್ಷ ಹಿಂದೂ ಹಾಗೂ ಸಿಖ್ ನಿರಾಶ್ರಿತರು ಭಾರತಕ್ಕೆ ಬಂದಿದ್ದಾರೆ.

Write A Comment