ರಾಷ್ಟ್ರೀಯ

ಕಪ್ಪುಹಣ: ವಿದೇಶದಲ್ಲಿ ಅಕ್ರಮ ಸಂಪತ್ತು ಪತ್ತೆಯಾದಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲು

Pinterest LinkedIn Tumblr

black-money-generic_650x400_81435806469ಹೊಸದಿಲ್ಲಿ, ಸೆ.8: ವಿದೇಶಗಳಲ್ಲಿ ಅಕ್ರಮ ಸಂಪತ್ತು ಹೊಂದಿರುವ ವ್ಯಕ್ತಿಗಳ ವಿರುದ್ಧ ನ್ಯಾಯಾಲಯಗಳಲ್ಲಿ ಕಡ್ಡಾಯವಾಗಿ ಪ್ರಕರಣಗಳನ್ನು ದಾಖಲಿಸುವಂತೆ ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು (ಸಿಬಿಡಿಟಿ) ಆದಾಯ ತೆರಿಗೆ ಇಲಾಖೆಗೆ ನಿರ್ದೇಶನ ನೀಡಿದೆ.

ಆದಾಯ ತೆರಿಗೆ ಕಾಯ್ದೆಯಡಿಯಲ್ಲಿ (1961) ಇಂತಹ ಪ್ರಕರಣಗಳನ್ನು ಸಂಯೋಜಿಸುವ ಕ್ರಮದಿಂದ ಪರಿಣಾಮ ಬೀರದು ಎಂಬ ಸಂದೇಹ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸಿಬಿಡಿಟಿ ಇತ್ತೀಚೆಗೆ ಎಲ್ಲ ಐಟಿ ಕಚೇರಿಗಳಿಗೆ ಈ ಆದೇಶವನ್ನು ನೀಡಿದೆ. ಕಪ್ಪುಹಣದ ತನಿಖೆಗೆ ರಚನೆಯಾಗಿರುವ ವಿಶೇಷ ತನಿಖಾ ತಂಡದ (ಸಿಟ್) ಅಭಿಪ್ರಾಯವನ್ನು ಈ ವಿಷಯದಲ್ಲಿ ಕೋರಿ ಒಪ್ಪಿಗೆ ಪಡೆದುಕೊಳ್ಳಲಾಗಿದೆ.

ಇಂತಹ ಅಪರಾಧಗಳ ವಿಚಾರದಲ್ಲಿ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸುವುದು ಕಡ್ಡಾಯ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ ಎಂದು ಸಿಬಿಡಿಟಿ ಮೂಲಗಳು ತಿಳಿಸಿವೆ.

Write A Comment