ರಾಷ್ಟ್ರೀಯ

ಚೀನದ ನಷ್ಟ ಭಾರತಕ್ಕೆ ಲಾಭವಾಗಬಹುದೇ?: ಕೋಟ್ಯಧೀಶರ ಸಭೆಯಲ್ಲಿ ಮೋದಿ ಪ್ರಶ್ನೆ

Pinterest LinkedIn Tumblr

moಹೊಸದಿಲ್ಲಿ, ಸೆ.8: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬ್ಯಾಂಕರ್‌ಗಳು ಹಾಗೂ ಕೋಟ್ಯಧೀಶರನ್ನು ತನ್ನ ನಿವಾಸಕ್ಕೆ ಆಹ್ವಾನಿಸಿ, ಭಾರತವು ಹೇಗೆ ಜಾಗತಿಕ ಆರ್ಥಿಕ ತಲ್ಲಣವನ್ನು ನಿಭಾಯಿಸಬಹುದು. ಚೀನದ ಮಾರುಕಟ್ಟೆಯಲ್ಲಿ ಹೇಗೆ ಅವಕಾಶಗಳನ್ನು ಬಾಚಬಹುದು ಹಾಗೂ ಬೆಳವಣಿಗೆಯ ಸಂಕಷ್ಟಗಳ ಕುರಿತಾಗಿ ಬಿರುಸಿನ ಚರ್ಚೆ ನಡೆಸಿದ್ದಾರೆ.
ಹೊಸದಿಲ್ಲಿಯಲ್ಲಿ ಮುಂಜಾನೆ ನಡೆದ ಈ ಸಭೆಯಲ್ಲಿ ಭಾರತದ ಕುಬೇರ ಮುಕೇಶ್ ಅಂಬಾನಿ ಸಹಿತ ಉದ್ಯಮಪತಿಗಳು, ಕೇಂದ್ರ ವಿಶ್ವ ಸಚಿವ ಅರುಣ್ ಜೇಟ್ಲಿ, ಆರ್‌ಬಿಐ ಗವರ್ನರ್ ರಘುರಾಮ ರಾಜನ್, ಆರ್ಥಿಕಜ್ಞರು, ಸರಕಾರಿ ಹಾಗೂ ಖಾಸಗಿ ಬ್ಯಾಂಕ್‌ಗಳ ಮುಖ್ಯಸ್ಥರು ಭಾಗವಹಿಸಿದ್ದರು.
ಸಭೆಯಲ್ಲಿ ಉದ್ಯಮ ಚೇಂಬರ್ ಅಸೊಚಾಮ್, ಜಾಗತಿಕ ಹಿಂಜರಿತಗಳಿಗೆ ಭಾರತವನ್ನು ‘ಬುಲೆಟ್ ಪ್ರೂಫ್’ ಮೊದಲು ತ್ವರಿತವಾಗಿ ಕೆಲಸ ಮಾಡುವ ಅಗತ್ಯವಿದೆಯೆಂದು ಮೋದಿಯವರ ನೀತಿ ನಿರ್ಮಾತೃಗಳಿಗೆ ತಿಳಿಸಿತು. ಸ್ಟೀಲ್‌ನಂತಹ ಚೀನಿ ಉತ್ಪನ್ನಗಳ ರಾಶಿ ಹೇರುವಿಕೆಯನ್ನು ತಡೆಯಲು ಬಡ್ಡಿ ದರಗಳು ಹಾಗೂ ಹೊಸ ಸುಂಕಗಳಲ್ಲಿ ಭಾರೀ ಕಡಿತ ಮಾಡುವಂತೆ ಅದು ಕರೆ ನೀಡಿತು.
2013ರ ‘ಗೋಪುರ ತಂತ್ರದ’ ಬಳಿಕ ಭಾರತದ ಮ್ಯಾಕ್ರೊ ಆರ್ಥಿಕ ಪರಿಸ್ಥಿತಿಯು ಗಮನಾರ್ಹವಾಗಿ ಸುಧಾರಿಸಿದೆ. ಅದು ಆಮದು ಮಾಡುವ ಅಗತ್ಯ ವಸ್ತುಗಳ ಕಡಿಮೆ ಬೆಲೆಗಳಿಗೆ ಈ ಶ್ರೇಯ ಸಲ್ಲಬೇಕು. ಅಲ್ಲದೆ, ಎರಡಂಕಿಯಿದ್ದ ಹಣದುಬ್ಬರ ಅರ್ಧಕ್ಕಿಳಿದಿದೆ.
ಭಾರತದ ಆರ್ಥಿಕತೆಯು ಸೃಷ್ಟಿಯಾಗುತ್ತಿರುವ ಮಾರುಕಟ್ಟೆಗಳಲ್ಲಿ ಅಪೂರ್ವವಾದ ಉಜ್ವಲ ಬಿಂದುವೆಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯು ಪರಿಗಣಿಸುತ್ತಿದೆ. ಹಣವು ಚೀನದಿಂದ ಹೊರಗೆ ಹರಿಯುತ್ತಿರುವುದರಿಂದ ಹೆಚ್ಚು ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಇದೊಂದು ಅವಕಾಶವೆಂದು ಮೋದಿ ಅಭಿಪ್ರಾಯಿಸಿದ್ದಾರೆ.
ಆದರೆ, ಚೀನದ ನಷ್ಟವನ್ನು ಭಾರತದ ಲಾಭವಾಗಿ ಪರಿವರ್ತಿಸುವುದು ಸುಲಭವಾಗದು. ಅಧಿಕಾರಕ್ಕೇರಿದ ಮೇಲೆ ಮೋದಿ ಸಾಕಷ್ಟು ವೇಗದಲ್ಲಿ ಮುಂದುವರಿದಿಲ್ಲವೆಂದು ಹೂಡಿಕೆದಾರರು ಹಾಗೂ ಕಾರ್ಪೊರೇಟ್‌ಗಳು ಭಾರೀ ಚಿಂತೆಯಲ್ಲಿವೆ. ಜೂನ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ವಾರ್ಷಿಕ ಬೆಳವಣಿಗೆ ಶೇ.7ಕ್ಕೆ ಇಳಿದಿದೆ.
ಮೋದಿ ಯಶಸ್ವಿ ದೇಶವೊಂದನ್ನು ಮುನ್ನಡೆಸುತ್ತಿದ್ದಾರೆ. ಏನು ಮಾಡಬೇಕೆಂಬುದು ತನಗೆ ತಿಳಿದಿದೆ ಎಂದು ಅವರು 2 ವರ್ಷ ಅಭಿಯಾನ ನಡೆಸಿದ್ದರು. ಸ್ವಾತಂತ್ರದ ಬಳಿಕ ಭರ್ಜರಿ ಬಹುಮತದೊಂದಿಗೆ 15 ತಿಂಗಳುಗಳಿಂದ ಅವರು ಆಡಳಿತದಲ್ಲಿದ್ದಾರೆ. ಆದರೆ, ಇನ್ನೂ ಏನೂ ಸಂಭವಿಸಲಿಲ್ಲವೆಂದು ಅಮೆರಿಕದ ಹೂಡಿಕೆದಾರ ಜಿಮ್ ರೋಗರ್ಸ್ ಮಂಗಳವಾರ ರಾಯ್ಟರ್ಸ್ ಟ್ರೇಡಿಂಗ್ ಇಂಡಿಯಾಗೆ ತಿಳಿಸಿದ್ದಾರೆ.
ರೋಗರ್ಸ್, ತನ್ನ ಭಾರತದ ಹೂಡಿಕೆಗಳನ್ನು ಮಾರಾಟ ಮಾಡಿದ್ದೇನೆಂದು ಇತ್ತೀಚೆಗೆ ಘೋಷಿಸಿದ್ದರು.
ರೈತರ ಪ್ರತಿಭಟನೆಯು ಮಹತ್ತ್ವದ ಭೂ ಸುಧಾರಣೆಯನ್ನು ಕೈಬಿಡುವಂತೆ ಸರಕಾರವನ್ನು ಬಲವಂತಪಡಿಸಿದ ಹಾಗೂ ವಿಪಕ್ಷಗಳು ಬೆಳವಣಿಗೆಗೆ ಉತ್ತೇಜನ ನೀಡುವ ತೆರಿಗೆ ಸುಧಾರಣೆಯನ್ನು ವಿಳಂಬಿಸಿದ ಬಳಿಕ, ವಿದೇಶಿ ಹಣದ ಭಾರತ ಪ್ರವೇಶ ಸುಲಭವಾಗುವಂತೆ ಮೋದಿ ಶೀಘ್ರವೇ ಹೊಸ ಕ್ರಮಗಳನ್ನು ಪ್ರಕಟಿಸಬಹುದೆಂಬ ನಿರೀಕ್ಷೆ ಹೆಚ್ಚುತ್ತಿದೆ.
ಸರಕಾರದ ವೆಚ್ಚ ಕಡಿತದಿಂದಾಗಿ, 2015-16ರಲ್ಲಿ ಭಾರತದ ಆರ್ಥಿಕತೆಯು ಶೇ.8 ಅಥವಾ ಹೆಚ್ಚು ಬೆಳೆಯಲಿದೆಯೆಂದು ಸರಕಾರ ಭವಿಷ್ಯ ನುಡಿಯುತ್ತಿದೆ. ಆದಾಗ್ಯೂ, ಬ್ಯಾಂಕ್‌ಗಳು ಹಾಗೂ ವ್ಯಾಪಾರಗಳು ಕೆಟ್ಟ ಸಾಲಗಳಿಂದ ಹಾಗೂ ಹೆಚ್ಚು ಸಾಲದ ಬಡ್ಡಿ ದರದಿಂದ ನರಳುತ್ತಿರುವುದರೊಂದಿಗೆ, ಖಾಸಗಿ ಹೂಡಿಕೆ ನಿಧಾನವಾಗಿದೆ.
ವಾಸ್ತವ ಆರ್ಥಿಕತೆಯಲ್ಲಿ ಮಹತ್ತ್ವದ ಆರ್ಥಿಕ ಚೇತರಿಕೆಯ ಯಾವುದೇ ಲಕ್ಷಣಗಳಿಲ್ಲ. ಉದಾಹರಣೆಗೆ, ನಿರ್ಮಾಣ ಹಾಗೂ ವಜ್ರ ಪಾಲಿಶಿಂಗ್ ಕೈಗಾರಿಕೆಗಳಲ್ಲಿ ಭಾರೀ ಪ್ರಮಾಣದಲ್ಲಿ ನೌಕರರ ಕಡಿತವಾಗುತ್ತಿದೆ.
ಹೂಡಿಕೆ ಹಾಗೂ ಬೆಳವಣಿಗೆಯ ಪುನರುಜ್ಜೀವನಕ್ಕೆ ಸಹಾಯವಾಗುವಂತೆ ಮಾರ್ಚ್‌ನೊಳಗೆ ಬಡ್ಡಿಯ ದರಗಳನ್ನು ಶೇ. 1.25ರಷ್ಟು ಕಡಿತಗೊಳಿಸುವಂತೆ ಆರ್‌ಬಿಐ ವರಿಷ್ಠ ರಘುರಾಮರಾಜನ್‌ರಿಗೆ ಅಸೋಚಾಮ್ ಕರೆ ನೀಡಿದೆ.

Write A Comment