ರಾಷ್ಟ್ರೀಯ

ಕೇರಳದಲ್ಲಿ ದೋಣಿ ದುರಂತ: ಸಾವಿಗೀಡಾದವರ ಸಂಖ್ಯೆ 10ಕ್ಕೆ ಏರಿಕೆ

Pinterest LinkedIn Tumblr

house-boatಕೊಚ್ಚಿ: ಕೇರಳದ ಆಲಪ್ಪುಜ ಜಿಲ್ಲೆಯಲ್ಲಿ ಮೊನ್ನೆ ಬುಧವಾರ ಸಂಭವಿಸಿದ ದೋಣಿ ಅವಘಡದಲ್ಲಿ ಸಾವಿಗೀಡಾದವರ ಸಂಖ್ಯೆ 10ಕ್ಕೆ ಏರಿದೆ. ನಿನ್ನೆ ಮತ್ತೆರಡು ಶವಗಳನ್ನು ಹೊರತೆಗೆಯಲಾಯಿತು.

ಕೊಚ್ಚಿಯಲ್ಲಿ ಮೊನ್ನೆ 26ರಂದು ಮೀನುಗಾರಿಕೆ ನಡೆಸುತ್ತಿದ್ದ ಹಡಗು ಡಿಕ್ಕಿ ಹೊಡೆದ ಪರಿಣಾಮ 35 ಮಂದಿ ಪ್ರಯಾಣಿಕರನ್ನು  ಹೊತ್ತು ಸಾಗುತ್ತಿದ್ದ ದೋಣಿ ಮಗುಚಿ ಬಿದ್ದು 6 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. 25 ಮಂದಿಯನ್ನು ರಕ್ಷಿಸಲಾಗಿತ್ತು.

ಇಂದು ಮತ್ತೆ ಪುನ್ನಮಾಡಾ ಎಂಬ ನದಿಯ ಹಿನ್ನೀರಿನಲ್ಲಿ ಬೆಂಕಿ ಅವಘಡದಿಂದ ಒಂ ದು ದೋಣಿ ಸಂಪೂರ್ಣ ನಾಶಗೊಂಡು ಮತ್ತೊಂದು ಭಾಗಶಹ ಹಾಳಾಗಿದೆ. ಇದರಲ್ಲಿ ಪ್ರಯಾಣಿಕರಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಶಾರ್ಟ್ ಸಕ್ಯ್ರೂಟಿನಿಂದ ಈ ಅವಘಟ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

Write A Comment