ನವದೆಹಲಿ: ಗ್ಯಾಸ್ ಸಬ್ಸಿಡಿ ತ್ಯಾಗ ಮಾಡಲು ಪ್ರಧಾನಿ ನರೇಂದ್ರ ಮೋದಿ ಮಾಡಿದ ಮನವಿಗೆ ಮನಸೋತಿರುವ ಭಾರತೀಯರು ಪ್ರತಿ ನಿತ್ಯ ಸರಾಸರಿ 30,000 ಗ್ರಾಹಕರು ಸಬ್ಸಿಡಿ ತ್ಯಾಗ ಮಾಡುತ್ತಿದ್ದಾರೆ.
ಮೂರು ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಸಬ್ಸಿಡಿ ತ್ಯಜಿಸುವಂತೆ ಜನರ ಮನವೊಲಿಸಲು ಮನೆಮನೆ ಅಭಿಯಾನ ಕೈಗೊಂಡಿದ್ದು. ಇದರಿಂದಾಗಿ ನಿತ್ಯ 30ರಿಂದ 40 ಸಾವಿರ ಮಂದಿ ಸಬ್ಸಿಡಿ ತ್ಯಜಿಸುವ ಅರ್ಜಿಗಳಿಗೆ ಸಹಿ ಹಾಕುತ್ತಿದ್ದಾರೆ.
ಸ್ವಾತಂತ್ರೋತ್ಸವ ಭಾಷಣದಲ್ಲಿ ಮೋದಿ 20 ಲಕ್ಷ ಗ್ರಾಹಕರು ಸಬ್ಸಿಡಿ ತ್ಯಾಗ ಮಾಡಿದ್ದಾರೆ ಎಂದು ಹೇಳಿದ್ದರು. ಈ ಹೇಳಿಕೆ ನೀಡಿದ ಅನಂತರ 1 ಲಕ್ಷಕ್ಕೂ ಹೆಚ್ಚು ಗ್ರಾಹಕರು ಸಬ್ಸಿಡಿ ತ್ಯಾಗ ಮಾಡಿದ್ದು, ಪ್ರಸ್ತುತ ಒಟ್ಟು 22.57 ಲಕ್ಷ ಗ್ರಾಹಕರು ಸಬ್ಸಿಡಿ ತ್ಯಾಗ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.
ಶನಿವಾರ ಒಂದೇ ದಿನ 29000 ಗ್ರಾಹಕರು ಸಬ್ಸಿಡಿ ತ್ಯಜಿಸಲು ಒಪ್ಪಿದ್ದಾರೆ. ಸುಮಾರು 50,000 ಗ್ರಾಹಕರು ಸಬ್ಸಿಡಿ ತ್ಯಜಿಸಲು ಅರ್ಜಿ ಸಲ್ಲಿಸಿದ್ದು, ಅವರ ಅರ್ಜಿ ಪರಿಶೀಲನೆಯಲ್ಲಿದೆ ಎಂದು ಹೇಳಲಾಗಿದೆ.