ರಾಷ್ಟ್ರೀಯ

ಮೂವರನ್ನು ಮಸಣಕ್ಕೊಯ್ದ ಹೆಲಿಕಾಪ್ಟರ್ ಅವಶೇಷ ಪತ್ತೆ

Pinterest LinkedIn Tumblr

heliಆಗಸ್ಟ್ 4 ರಂದು ಜಿಲ್ಲಾಧಿಕಾರಿ ಪವನ್ ಸೇರಿದಂತೆ ಮೂವರನ್ನು ಹೊತ್ತೊಯ್ದು ನಾಪತ್ತೆಯಾಗಿದ್ದ ಹೆಲಿಕಾಪ್ಟರ್ ಅರುಣಾಚಲ ಪ್ರದೇಶದ ತಿಪಾರ್ ಜಿಲ್ಲೆಯಲ್ಲಿ ಪತ್ತೆಯಾಗಿದ್ದು ಖೋನ್ಸಾದಿಂದ 12 ಕಿಮೀ ದೂರದಲ್ಲಿ ಜಿಲ್ಲಾಧಿಕಾರಿ ಮತ್ತು ಇಬ್ಬರು ಪೈಲೆಟ್ ಗಳ ಶವಗಳೂ ಸಹ ಪತ್ತೆಯಾಗಿದೆ.

ಖೋನ್ಸಾ ದಿಂದ ಆಗಷ್ಟ್ 4 ರಂದು ಟೇಕ್ ಆಫ್ ಆಗಿದ್ದ ವಿಮಾನ ಕೇವಲ 5 ನಿಮಿಷಗಳ ಅವಧಿಯಲ್ಲೇ ಏರ್ ಟ್ರಾಫಿಕ್ ಕಂಟ್ರೋಲ್ ಅಧಿಕಾರಿಗಳ ಸಂಪರ್ಕ ಕಳೆದುಕೊಂಡಿತ್ತು. ಅಲ್ಲದೇ ಒಬ್ಬ ಮೈಸೂರು ಮೂಲದ ಪೈಲಟ್ ಸೇರಿದಂತೆ ಇಬ್ಬರು ಪೈಲಟ್ ಹಾಗೂ ಒಬ್ಬ ಜಿಲ್ಲಾಧಿಕಾರಿ ಇದರಲ್ಲಿದ್ದರು.

ಈ ಹಿನ್ನೆಲೆಯಲ್ಲಿ ವಾಯುಸೇನಾ ಅಧಿಕಾರಿಗಳು ಹುಡುಕಾಟ ನಡೆಸಿದ್ದರು. ಆದರೆ ಇಂದು ಅಪಘಾತಗೊಂಡ ಹೆಲಿಕಾಪ್ಟರ್ ನ ಅವಶೇಷಗಳು ಪತ್ತೆಯಾಗಿದ್ದು ಅದರಲ್ಲಿದ್ದ ಮೂವರ ಶವಗಳೂ ಪತ್ತೆಯಾಗಿದೆ ಎಂದು ಕೇಂದ್ರದ ರಾಜ್ಯ ಖಾತೆ ಸಚಿವ ಕಿರಣ್ ರಿಜೂಜ್ ಅವರು ಸ್ಪಷ್ಟನೆ ನೀಡಿದ್ದಾರೆ.

Write A Comment