ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾರ್ಕಾಂಡೇಯ ಕಟ್ಜು ಅವರ ವಾದ ಅಭಿವ್ಯಕ್ತಿ ಸ್ವಾತಂತ್ರ್ಯವಾಗಿದ್ದು ಇದರಿಂದ ಯಾವುದೇ ಧಕ್ಕೆ ಉಂಟಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಕಟ್ಜು ಅವರು ತಮ್ಮ ಬ್ಲಾಗ್ ಬರಹವೊಂದರಲ್ಲಿ ಗಾಂಧೀಜಿಯವರನ್ನು ಬ್ರಿಟಿಷ್ ಏಜೆಂಟ್ ಎಂಬುದಾಗಿಯೂ ನೇತಾಜಿ ಅವರನ್ನು ಜಪಾನ್ ಏಜೆಂಟ್ ಎಂಬುದಾಗಿಯೂ ಬಣ್ಣಿಸಿದ್ದರು. ನ್ಯಾಯಮೂರ್ತಿ ಕಟ್ಜು ಅವರ ಹೇಳಿಕೆಯನ್ನು ಖಂಡಿಸಿದ ರಾಜ್ಯಸಭೆ ಮತ್ತು ಲೋಕಸಭೆ ಅವರ ಹೇಳಿಕೆಯನ್ನು ತಳ್ಳಿಹಾಕುವ ಸರ್ವಾನುಮತದ ನಿರ್ಣಯ ಅಂಗೀಕರಿಸಿದ್ದವು.
ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ ಮಾಜಿ ನ್ಯಾಯಮೂರ್ತಿ ಮಾರ್ಕಾಂಡೇಯ ಕಟ್ಜು ಅವರನ್ನು ಸಂಸತ್ತು ಖಂಡಿಸಿದ್ದರಿಂದ ಕಟ್ಜು ಅವರ ವಾಕ್ ಸ್ವಾತಂತ್ರ್ಯಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಅಥವಾ ಅವರ ಗೌರವಕ್ಕೆ ಧಕ್ಕೆಯಾಗಿಲ್ಲ ಎಂದು ಸುಪ್ರೀಂಕೋರ್ಟ್ ಸೋಮವಾರ ವಿವರಿಸಿದೆ.
ಅಲ್ಲದೇ ಈ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗೆ ಒಪ್ಪಿದ ನ್ಯಾಯಮೂರ್ತಿ ಟಿ.ಎಸ್. ಥಾಕೂರ್ ಅವರ ಪೀಠವು ಹಿರಿಯ ವಕೀಲ ಫಾಲಿ ನಾರಿಮನ್ ಅವರನ್ನು ನ್ಯಾಯಾಲಯದ ಸಹಾಯಕರನ್ನಾಗಿ ನೇಮಿಸಿತು.