ತಾವು ಮುಂಬರಲಿರುವ ವಿಧಾನ ಸಭೆ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸುವ ಮೂಲಕ ಕುತೂಹಲಕ್ಕೆ ಕಾರಣರಾಗಿದ್ದಾರೆ.
ಬಿಹಾರದಲ್ಲಿ ಒಂದೆಡೆ ಬಿಜೆಪಿ ತಾನು ಗೆಲ್ಲುವ ಮೂಲಕ ಕಮಲವನ್ನು ಅರಳಿಸಬೇಕು ಎಂದು ಪಣ ತೊಟ್ಟಿದ್ದರೆ ಮತ್ತೊಂದೆಡೆ ಬಿಜೆಪಿಯನ್ನೂ ಹೇಗಾದರೂ ಮಾಡಿ ಹೀನಾಯವಾಗಿ ಸೋಲಿಸಬೇಕು ಎಂದು ಪಣ ತೊಟ್ಟಿರುವ ಇತರ ಪಕ್ಷಗಳು ಈಗಾಗಲೇ ಚುನಾವಣಾ ಸಿದ್ದತೆಯಲ್ಲಿ ತೊಡಗಿವೆ.
ಈ ನಡುವೆ ಜೆಡಿಯು, ಆರ್ಜೆಡಿ, ಕಾಂಗ್ರೆಸ್ ಹಾಗೂ ಎನ್ಸಿಪಿ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ನಿತೀಶ್ ಕುಮಾರ್ ತಾವು ಯಾವುದೇ ಕಾರಣಕ್ಕೂ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಬದಲಾಗಿ ನನ್ನ ಸಮಯವನ್ನು ಚುನಾವಣೆ ಪ್ರಚಾರಕ್ಕೆ ವಿನಿಯೋಗಿಸುತ್ತೇನೆ ಎಂದು ಘೋಷಿಸಿದ್ದು ಚುನಾವಣಾ ಪ್ರಚಾರದ ಹೊಣೆಯನ್ನು ನಿಭಾಯಿಸುವುದರತ್ತ ಹೆಚ್ಚು ಗಮನ ಹರಿಸುವುದು ನನ್ನ ಮೊದಲ ಆದ್ಯತೆ ಎಂದು ವಿವರಿಸಿದ್ದಾರೆ.