ನವದೆಹಲಿ: ಲಿಬಿಯಾದಲ್ಲಿ ಐಸಿಸ್ ಉಗ್ರ ಸೆರೆಯಲ್ಲಿರುವ ಆಂಧ್ರಪ್ರದೇಶದ ಶ್ರೀಕಾಕುಳಂನ ಗೋಪಿಕೃಷ್ಣ, ಹೈದರಾಬಾದಿನ ಬಲರಾಮ್ ಸುರಕ್ಷಿತವಾಗಿದ್ದಾರೆಂದು ಮಾಹಿತಿ ಲಭಿಸಿದೆ
ಬಲರಾಮ್ ತಾವು ಸುರಕ್ಷಿತವಾಗಿದ್ದೇವೆ ಎಂದು ಪತ್ನಿಗೆ ಸಂದೇಶ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯದಲ್ಲಿಯೇ ಅವರಿಬ್ಬರ ಬಿಡುಗಡೆಯಾಗುವ ನಿರೀಕ್ಷೆ ಇದ್ದು ಕೇಂದ್ರ ಸರ್ಕಾರ ಈ ದಿಶೆಯಲ್ಲಿ ಸಕಲ ಪ್ರಯತ್ನಗಳನ್ನು ಮುಂದುವರೆಸಿದೆ.
ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿದ್ದ ನಾಲ್ವರು ಭಾರತೀಯರನ್ನು ನಿನ್ನೆ ಲಿಬಿಯಾದ ಟ್ರೈಪೋಲೀಯ ಸಿರ್ತೆ ನಗರದಿಂದ ಇಸಿಸ್ ಭಯೋತ್ಪಾದಕರು ಅಪಹರಿಸಿದ್ದರು.
ಅವರಲ್ಲಿ ಇಬ್ಬರು ಕನ್ನಡಿಗರನ್ನು ಬಿಡುಗಡೆ ಮಾಡಿದ್ದ ಉಗ್ರರು ಆಂಧ್ರ ಮತ್ತು ತೆಲಂಗಾಣದ ಮತ್ತಿಬ್ಬರನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡುವ ಭರವಸೆಯನ್ನು ನೀಡಿದ್ದರು.
ಬಿಡುಗಡೆಯಾಗಿರುವ ಇಬ್ಬರು ಕನ್ನಡಿಗರು ಸದ್ಯ ಲಿಬಿಯಾದ ಭಾರತೀಯ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದು, ಇಂದು ಭಾರತಕ್ಕೆ ಮರಳುವ ಸಾಧ್ಯತೆ ಇದೆ.