ರಾಷ್ಟ್ರೀಯ

ಕಲಾಂ ಮೇಲೆ ಕಲ್ಲು ತೂರಿದ್ದ ರೈತನಿಂದ ಪ್ರಾಯಶ್ಚಿತ್ತ ಉಪವಾಸ

Pinterest LinkedIn Tumblr

kalam2ಪಾಟ್ನಾ: ದಿವಂಗತ ಮಾಜಿ ರಾಷ್ಟ್ರಪತಿ, ವಿಜ್ಞಾನಿ ಅಬ್ದುಲ್ ಕಲಾಂ ಅವರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಜನಸಾಮಾನ್ಯರ ರಾಷ್ಟ್ರಪತಿಯಾಗಿದ್ದವರು ಯಾರಿಗೆ ಇಷ್ಟ ಇಲ್ಲ ಹೇಳಿ? ಅಬ್ದುಲ್ ಕಲಾರಂ ರನ್ನು ಆರಾಧ್ಯ ದೈವವಾಗಿರಿಸಿಕೊಂಡಿರುವ ಬಿಹಾರದ ರೈತ ಭೋಲಾ ಮಹತೋ, ಕಲಾಮ್ ನಿಧನರಾದ ದಿನದಿಂದಲೂ ಉಪವಾಸ ಮಾಡುತ್ತಿದ್ದಾರೆ.

ಇದಕ್ಕೆ ಕಾರಣವೂ ಇದೆ. 2008 ರಲ್ಲಿ ತಾನು ಅದ್ಬುಲ್ ಕಲಾಮ್ ಅವರತ್ತ ಕಲ್ಲು ತೂರಿದ್ದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಉಪವಾಸ ನಿರತರಾಗಿದ್ದಾರಂತೆ ರೈತಾಪಿ ವರ್ಗದ ಈ ಅಭಿಮಾನಿ. ನಳಂದಾ ವಿಶ್ವವಿದ್ಯಾನಿಲಯವನ್ನು ಪುನಶ್ಚೇತನಗೊಳಿಸುವ ಸಲುವಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಅಬ್ದುಲ್ ಕಲಾಮ್ ಸಹ ಬಂದಿದ್ದರು. ಆದರೆ ವಿಶ್ವವಿದ್ಯಾನಿಲಯ ನಿರ್ಮಾಣಕ್ಕೆ 446 ಎಕರೆ   ಭೂಮಿ ನೀಡಿದ್ದಕ್ಕೆ ಸೂಕ್ತ ಪರಿಹಾರ ಸಿಗದೇ ಆಕ್ರೋಶಗೊಂಡಿದ್ದ ರೈತರ ತಂಡವೊಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರತ್ತ ಮಣ್ಣಿನ ಹೆಂಟೆಗಳನ್ನು ಸಿ.ಎಂ ನಿತೀಶ್ ಕುಮಾರ್ ಮೇಲೆ ತೂರಿದ್ದರು. ಈ ವೇಳೆ ಭೋಲಾ ಮಹತೋ ತೂರಿದ್ದ ಕಲ್ಲು ಅಬ್ದುಲ್ ಕಲಾಂ ಅವರ ಮೇಲೆ ಬಿದ್ದಿತ್ತು. ಕಲ್ಲು ತೂರಿದ್ದರ ತಪ್ಪಿಗೆ ಕಲಾಂ ಅವರ ಅಂತ್ಯಕ್ರಿಯೆ ನಡೆಯುವವರೆಗೂ ಭೋಲಾ ಮಹತೋ ಉಪವಾಸ ಮಾಡಲಿದ್ದಾರೆ.

ರೈತರ ಪ್ರತಿಭಟನೆ ನಂತರ ಭೋಲಾ ಮಹತೋ ಹಾಗೂ ಇನ್ನು ಮೂವರು ರೈತರೊಂದಿಗೆ ಮಾತನಾಡಿದ್ದ ಕಲಾಂ, ಅವರ ಸಮಸ್ಯೆಗಳನ್ನು ಅಳಿಸಿದ್ದ ಘಟನೆಯನ್ನು ಭೋಲಾ ಮಹತೋ ಸ್ಮರಿಸಿದ್ದಾರೆ. ಅಲ್ಲದೇ ಮುಂದಿನ ಅದೆಷ್ಟೋ ಪೀಳಿಗೆಗಳಿಗೆ ಉಪಯೋಗವಾಗುವಂತಹ ಶ್ರೇಷ್ಠ ಉಡುಗೊರೆಯನ್ನು(ವಿಶ್ವವಿದ್ಯಾನಿಲಯ)ವನ್ನು ಕಲಾಂ ನಮಗೆ ನೀಡಿದ್ದಾರೆ ಎಂದು ಮಹತೋ ಭಾವುಕರಾಗಿ ಕಲಾಂ ಅವರನ್ನು ಸ್ಮರಿಸಿದ್ದಾರೆ. ಕಲಾಂ ಅವರತ್ತ ಕಲ್ಲು ತೂರಾಟ ಮಾಡಿದ್ದರಿಂದ ಇಂದಿಗೂ ರೈತರನೇಕರಲ್ಲಿ ಅಪರಾಧಿಭಾವನೆ ಕಾಡುತ್ತಿದೆ ಎಂದು ಮಹತೋ ಹೇಳಿದ್ದಾರೆ. ನಳಂದ ವಿಶ್ವವಿದ್ಯಾನಿಲಯ ನಿತೀಶ್ ಕುಮಾರ್ ಹಾಗೂ ಅಬ್ದುಲ್ ಕಲಾಂ ಅವರ ಕನಸಿನ ಕೂಸಾಗಿತ್ತು. ಇಂದು ನಳಂದ ವಿಶ್ವವಿದ್ಯಾನಿಲಯ ಪುನಶ್ಚೇತನಗೊಂಡಿದ್ದು ಮತ್ತೆ ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದಿದೆ.

Write A Comment