ರಾಷ್ಟ್ರೀಯ

ಡಾ.ಕಲಾಂ ಸಸ್ಯಾಹಾರಿ ಆದದ್ದು ಹೇಗೆ ? ಇಲ್ಲಿದೆ ವರದಿ

Pinterest LinkedIn Tumblr

kalam

ನವದೆಹಲಿ: ಕಲಾಂ ಓರ್ವ ಸರಳ ಸಜ್ಜನಿಕೆಯ ವ್ಯಕ್ತಿಯಷ್ಟೇ ಅಲ್ಲ. ಅವರು ಮುಸಲ್ಮಾನರಾದರೂ ಸಂಪೂರ್ಣ ಸಸ್ಯಾಹಾರವನ್ನೇ ಸೇವಿಸುತ್ತಿದ್ದರು. 1950ರ ದಶಕದಲ್ಲಿ ಕಲಾಂ ಹಾಸ್ಟೆಲ್‍ನಲ್ಲಿ ಓದುತ್ತಿದ್ದಾಗ ವಿದ್ಯಾರ್ಥಿ ವೇತನದಿಂದ ಬಂದ ಹಣವನ್ನು ಮಾತ್ರ ಬಳಕೆ ಮಾಡುತ್ತಿದ್ದರು. ಆಗ ಮಾಂಸಾಹಾರವನ್ನು ಅಪರೂಪಕ್ಕೊಮ್ಮೆ ಸೇವಿಸುತ್ತಿದ್ದರು. ಆದರೆ ಪುಸ್ತಕ ಕೊಳ್ಳಲು ಶಿಕ್ಷಣಕ್ಕೆ ಹಣಕಾಸಿನ ಸಮಸ್ಯೆ ಬಂದಾಗ ಸಸ್ಯಾಹಾರಿಯಾಗಿಯೇ ಬದಲಾದರು.

ಅಷ್ಟೇ ಅಲ್ಲದೇ ಅಮ್ಮನ ಜೊತೆ ಇರುವಾಗಲೂ ನಾನು ಅನ್ನ ರಸಂ ಅನ್ನೇ ಇಷ್ಟಪಟ್ಟು ತಿನ್ನುತ್ತಿದ್ದೆ ಎಂದು ಕಲಾಂ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಐಯ್ಯಾಂಗಾರ್ ಪುಳಿಯೋಗರೆ ಎಂದರೆ ನನಗೆ ತುಂಬಾ ಇಷ್ಟ ಎಂದು ಕಲಾಂ ಹೇಳಿಕೊಂಡಿದ್ದರು.

ಶಾಲಾ ದಿನದಲ್ಲಿ ಹೆಚ್ಚು ಬ್ರಾಹ್ಮಣರ ಜೊತೆ ಇರುತ್ತಿದ್ದರಿಂದ ಅವರನ್ನು ಕಲಾಂ ಐಯ್ಯರ್ ಎಂದೇ ಕರೆಯುತ್ತಿದ್ದೆವು ಎಂದು ಕಲಾಂ ಗೆಳೆಯರು ಹಾಗೂ ಸಹೋದ್ಯೋಗಿಗಳು ನೆನಪಿಸಿಕೊಳ್ಳುತ್ತಾರೆ.

Write A Comment