ರಾಷ್ಟ್ರೀಯ

ಕ್ಯಾಬೇಜ್ ಪಕೋಡಾ

Pinterest LinkedIn Tumblr

cabbage-pakodaಬೇಕಾಗುವ ಪದಾರ್ಥಗಳು:

ಹೆಚ್ಚಿದ ಕ್ಯಾಬೇಜ್ – 1 ಬಟ್ಟಲು
ಕಡ್ಲೆಹಿಟ್ಟು – 1.1/2 ಬಟ್ಟಲು
ಖಾರಪುಡಿ – 2 ಚಮಚ
ಹೆಚ್ಚಿದ ಈರುಳ್ಳಿ – 1/2 ಬಟ್ಟಲು
ಕೊತ್ತಂಬರಿ ಸೊಪ್ಪು- 4 ಚಮಚ
ಇಂಗು – 1 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟು – 1 ಚಮಚ
ಧನಿಯಾ ಪುಡಿ – ಒಂದು ಚಮಚ
ಜೀರಿಗೆ ಪುಡಿ- ಒಂದು ಚಮಚ
ಉಪ್ಪು – ರುಚಿಗೆ ತಕ್ಕಷ್ಟು.

ಮಾಡುವ ವಿಧಾನ:

ಕಡ್ಲೆಹಿಟ್ಟನ್ನು ಸ್ವಲ್ಪ ನೀರು ಸೇರಿಸಿ ಸ್ವಲ್ಪ ಗಟ್ಟಿ ಹದಕ್ಕೆ ಕಲಸಿಕೊಳ್ಳಿ.

ನಂತರ ಇದಕ್ಕೆ ಖಾರದ ಪುಡಿ, ಹೆಚ್ಚಿಟ್ಟುಕೊಂಡ ಈರುಳ್ಳಿ, ಕೊತ್ತಂಬರಿ ಸೊಪ್ಪು, ಇಂಗು, ಶುಂಠಿ-ಬೆಳ್ಳುಳ್ಳು ಪೇಸ್ಟ್, ದನಿಯಾ ಪುಡಿ, ಜೀರಿಗೆ ಪುಡಿ, ಉಪ್ಪು, ಹೆಚ್ಚಿಟ್ಟುಕೊಂಡ ಕ್ಯಾಬೇಜ್ ಎಲ್ಲಾ ಸಾಮಾಗ್ರಿಗಳನ್ನು ಒಂದೊಂದಾಗಿ ಸೇರಿಸಿ ಕಲಸಿ.
ಒಲೆಯ ಮೇಲೆ ಬಾಣಲೆಯಿಟ್ಟು ಎಣ್ಣೆ ಹಾಕಿ.

ಎಣ್ಣೆ ಕಾದ ಮೇಲೆ ಮಿಶ್ರಣಮಾಡಿಟ್ಟಕೊಂಡದ್ದನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ. ಕಾದ ಎಣ್ಣೆಗೆ ಹಾಕಿ. ಗರಿಗರಿಯಾಗಿ ಕರಿದರೆ ಬಿಸಿ ಬಿಸಿ ಕ್ಯಾಬೇಜ್ ಪಕೋಡಾ ಸಿದ್ಧವಾಗುತ್ತದೆ.

ಪಕೋಡಾವನ್ನು ಪುದಿನಾ ಚಟ್ನಿಯೊಂದಿಗೆ ಸವಿದರೆ ಹೆಚ್ಚು ರುಚಿ.

Write A Comment