ರಾಷ್ಟ್ರೀಯ

ಕಲಾಂ ಫೋಟೊಗೆ ಹಾರ ಹಾಕಿ ನಮನ ಸಲ್ಲಿಸಿದ ಜಾರ್ಖಂಡನ ಶಿಕ್ಷಣ ಸಚಿವೆ ನೀರಾ ಯಾದವ್‌ !

Pinterest LinkedIn Tumblr

kalam

ಕೊಡರ್ಮಾ: ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಭಾವಚಿತ್ರಕ್ಕೆ ಹಾರ ಹಾಕಿ ನಮನ ಸಲ್ಲಿಸಿರುವ ಆಘಾತಕಾರಿ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.

ಕೊಡರ್ಮಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಾರ್ಖಂಡನ ಶಿಕ್ಷಣ ಸಚಿವೆ ನೀರಾ ಯಾದವ್‌ ಕಲಾಂ ಫೋಟೊಗೆ ಹಾರ ಹಾಕಿ ನಮನ ಸಲ್ಲಿಸಿರುವುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಹಿಂದೂ ಸಂಪ್ರದಾಯದಲ್ಲಿ ಮೃತರ ಭಾವಚಿತ್ರಕ್ಕೆ ಮಾತ್ರ ಹೂವಿನ ಮಾಲೆ ಹಾಕಲಾಗುತ್ತದೆ. ಆದರೆ, ಬದುಕಿರುವ ವ್ಯಕ್ತಿಯ ಚಿತ್ರಕ್ಕೆ ಹಾರ ಹಾಕಿರುವ ಶಿಕ್ಷಣ ಸಚಿವೆಯ ಅರಿವಿನ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿವೆ.

ಶಾಲಾ ಸಮಾರಂಭದಲ್ಲಿ ಈ ಘಟನೆ ನಡೆದಿದ್ದು, ನೀರಾ ಯಾದವ್ ಜತೆಯಲ್ಲಿ ಬಿಜೆಪಿಯ ಶಾಸಕ ಮನೀಶ್‌ ಜೈಸ್ವಾಲ್‌ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ತಾವು ಪುಷ್ಪ ನಮನ ಸಲ್ಲಿಸುತ್ತಿರುವ ವ್ಯಕ್ತಿ ಬದುಕಿದ್ದಾರೆ ಎಂಬ ವಿಷಯ ಅಲ್ಲಿ ಸೇರಿದ್ದ ಯಾರೊಬ್ಬರಿಗೂ ತಿಳಿಯದಿರುವುದು ಅಚ್ಚರಿ ಮೂಡಿಸಿದೆ.

‘ಶಾಲೆಗಳಲ್ಲಿ ಇಂಥ ಮಹಾನ್ ನಾಯಕರ ಭಾವ ಚಿತ್ರ ಇರಬೇಕು, ಕಲಾಂ ಅವರಂಥ ಹಿರಿಯ ವಿಜ್ಞಾನಿಗಳ ಭಾವಚಿತ್ರಕ್ಕೆ ಹಾರ ಹಾಕುವುದರಲ್ಲಿ ತಪ್ಪೇನು ಇಲ್ಲ,’ ಎಂದು ನೀರಾ ಯಾದವ್‌ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

Write A Comment