ರಾಷ್ಟ್ರೀಯ

ಆರೋಪಿಗಳ ಲೈಂಗಿಕ ಕಿರುಕುಳ ತಡೆಯಲು 50 ಅಡಿ ಎತ್ತರದ ಫ್ಲೈಓವರ್‌ನಿಂದ ಹಾರಿದ ಮಹಿಳೆ

Pinterest LinkedIn Tumblr

raಜೈಪುರ್(ರಾಜಸ್ಥಾನ: ಅಟೋ ಚಾಲಕ ಮತ್ತು ಆತನ ಸ್ನೇಹಿತರ ಲೈಂಗಿಕ ಕಿರುಕುಳದಿಂದ ಬಚಾವ್‌ ಆಗಲು 35 ವರ್ಷದ ಮಹಿಳೆಯೊಬ್ಬಳು ಫ್ಲೈಓವರ್ ಮೇಲಿಂದ ಹಾರಿದ ಘಟನೆ ವರದಿಯಾಗಿದೆ.

ಮಹಿಳೆಯನ್ನು ಸವಾಯಿ ಮಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪಾದದ ಮೂಳೆ ಮುರಿದಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ರೂಪನ್‌ಗಢ್ ನಿವಾಸಿಯಾದ ಪಾರ್ವತಿ ಸೋಧಾಳಾ ಪ್ರದೇಶಕ್ಕೆ ತೆರಳಲು ಅಟೋ ಹತ್ತಿದ್ದರು. ಸ್ವಲ್ಪ ದೂರದ ಹೋದ ನಂತರ ಅಟೋ ಚಾಲಕ ಮತ್ತು ಆತನ ಗೆಳೆಯರು ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದಾರೆ. ಆರೋಪಿಗಳಿಂದ ತಪ್ಪಿಸಿಕೊಳ್ಳಲು 50 ಅಡಿ ಎತ್ತರವಿರುವ ಫ್ಲೈಓವರ್ ಮೇಲಿಂದ ಹಾರಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆ ಫ್ಲೈಓವರ್ ಮೇಲಿಂದ ನೇರವಾಗಿ ಕೆಳಗೆ ಬಿದ್ದಿದ್ದಲ್ಲಿ ಪ್ರಾಣಕ್ಕೆ ಅಪಾಯವಾಗುತ್ತಿತ್ತು. ಆದರೆ, ರಸ್ತೆಗೆ ಬೀಳುವ ಮುನ್ನ ಗಿಡವೊಂದಕ್ಕೆ ಸಿಕ್ಕಿಬಿದ್ದಿದ್ದರಿಂದ ಪ್ರಾಣ ಉಳಿದಿದೆ ಎನ್ನಲಾಗಿದೆ.

ಆರೋಪಿ ಅಟೋ ಚಾಲಕ ಮತ್ತು ಆತನ ಸ್ನೇಹಿತರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Write A Comment