ರಾಷ್ಟ್ರೀಯ

ಗರ್ಭಪಾತದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈ !!

Pinterest LinkedIn Tumblr

childವಿಶ್ವದ ಅನೇಕ ದೇಶಗಳಲ್ಲಿ ಗರ್ಭಪಾತ ನಿಷೇಧವಿದೆ. ಕಾನೂನು ಎಷ್ಟೇ ಬಿಗಿಯಾಗಿದ್ದರೂ ಗರ್ಭಪಾತದ ಸಂಖ್ಯೆ ಮಾತ್ರ ಕಡಿಮೆಯಾಗ್ತಾ ಇಲ್ಲ. ಅದರಲ್ಲಿ ವಿದ್ಯಾರ್ಥಿನಿಯರೇ ಮುಂದಿದ್ದಾರೆ.

ಚೀನಾದಲ್ಲಿ ಮದುವೆಗಿಂತ ಮೊದಲೇ ಗರ್ಭ ಧರಿಸುವವರ ಸಂಖ್ಯೆ ದಿನದಿನಕ್ಕೂ ಜಾಸ್ತಿಯಾಗುತ್ತಿದೆ. ಪ್ರತಿವರ್ಷ 1.30 ಮಿಲಿಯನಷ್ಟು ಮಂದಿ ಗರ್ಭಪಾತಕ್ಕೊಳಗಾಗುತ್ತಿದ್ದಾರೆ. ಅದರಲ್ಲೂ ಮಹಿಳೆಯರಿಗಿಂತ ಯುವತಿಯರ ಸಂಖ್ಯೆಯೇ ಜಾಸ್ತಿಯಂತೆ. ಶೇಕಡಾ 20 ರಷ್ಟು ಯುವತಿಯರು ಅಕ್ರಮ ಸಂಬಂಧ ಇಟ್ಟುಕೊಂಡು ಗರ್ಭವತಿಯರಾಗುತ್ತಾರಂತೆ.

ಅದರಲ್ಲಿ ಶೇಕಡಾ 90ರಷ್ಟು ಮಂದಿ ಗರ್ಭಪಾತ ಮಾಡಿಸಿಕೊಳ್ಳುತ್ತಾರಂತೆ. ಚೀನಾ ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಯೋಜನಾ ಆಯೋಗದ ಪ್ರಕಾರ 25 ವರ್ಷ ವಯಸ್ಸಿಗಿಂತ ಕಡಿಮೆ ಇರುವ ಮಹಿಳೆಯರೇ ಗರ್ಭಪಾತಕ್ಕೊಳಗಾಗುವುದು ಜಾಸ್ತಿಯಂತೆ. ಅದರಲ್ಲೂ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳೇ ಹೆಚ್ಚು ಎನ್ನಲಾಗಿದೆ.

Write A Comment