ರಾಷ್ಟ್ರೀಯ

ರವಿಶಂಕರ ಗುರೂಜಿಗೆ ತಾಲಿಬಾನ್ ರಿಂದ ಜೀವ ಬೆದರಿಕೆ?

Pinterest LinkedIn Tumblr

ravishankar-gurujiನವದೆಹಲಿ: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸ್ಥಾಪಕ, ಧಾರ್ಮಿಕ ಗುರು ರವಿಶಂಕರ ಗುರೂಜಿಗೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ತಾನಿಬಾನ್ ನಿಂದ ಜೀವಬೆದರಿಕೆ ಬಂದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ತಾಲಿಬಾನ್ ಸಂಘಟನೆ ಆರ್ಟ್ ಆಫ್ ಲೀವಿಂಗ್ ಕೇಂದ್ರಕ್ಕೆ ಎರಡು ಪತ್ರಗಳನ್ನು ಕಳುಹಿಸಿದ್ದು, ರವಿಶಂಕರ ಗುರೂಜಿ ಮತ್ತು ಅವರ ಅನುಯಾಯಿಗಳನ್ನು ಗುರಿಯಾಗಿಟ್ಟು ಬಾಂಬ್ ಸ್ಪೋಟ ಮಾಡುವುದಾಗಿ ಎಚ್ಚರಿಕೆ ನೀಡಿದೆ ಎಂದು ವರದಿ ತಿಳಿಸಿದೆ.

ಬೆದರಿಕೆ ಹಿನ್ನೆಲೆಯಲ್ಲಿ, ರವಿಶಂಕರ ಗುರೂಜಿ ಅವರ ಭದ್ರತೆಯನ್ನು ಮತ್ತು ತಾಲಿಬಾನ್ ಕಳುಹಿಸಿರುವ ಪತ್ರವನ್ನು ಪರಿಶೀಲಿಸುವಂತೆ  ಗೃಹ ಸಚಿವಾಲಯ ಅಧಿಕಾರಿಗಳಿಗೆ ಆದೇಶ ನೀಡಿದೆ.

2012ರಲ್ಲಿ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಹತ್ತಿರ ಆರ್ಟ್ ಆಫ್ ಲೀವಿಂಗ್ ಕೇಂದ್ರದ ಶಾಖೆಯನ್ನು ಆರಂಭಗೊಂಡಿತ್ತು. ಆ ಸಮಯದಲ್ಲಿ ರವಿಶಂಕರ ಗುರೂಜಿ  ಅಲ್ಲಿ ಶಾಂತಿ ಸ್ಥಾಪನೆ ಪ್ರಯತ್ನವಾಗಿ ತಾಲಿಬಾನರನ್ನು ಮಾತುಕತೆಗೆ ಕರೆದಿದ್ದರು.  ಕಳೆದ ವರ್ಷ ಉಗ್ರರು ಆರ್ಟ್ ಆಫ್ ಲೀವಿಂಗ್ ಕೇಂದ್ರಕ್ಕೆ ಬೆಂಕಿ ಹಚ್ಚಿದ್ದರು.

ಕಳೆದ ಮಾರ್ಚ್ ತಿಂಗಳಿನಲ್ಲಿ ರವಿಶಂಕರ ಗುರೂಜಿ ಮಲೇಷ್ಯಾದಲ್ಲಿ ಪ್ರವಾಸ  ಮಾಡುತ್ತಿದ್ದ ಸಂದರ್ಭದಲ್ಲಿ ಐಎಸ್ ಐಎಸ್ ಉಗ್ರಗಾಮಿ ಸಂಘಟನೆಯಿಂದಲೂ ಬೆದರಿಕೆ ಕರೆ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.

Write A Comment