ಅಂತರಾಷ್ಟ್ರೀಯ

ತನ್ನದೇ ಸ್ಪೈ ಡ್ರೋನ್‌ ಹೊಡೆದುರುಳಿಸಿ, ಭಾರತದ ರಾಯಭಾರಿಗೆ ಸಮನ್ಸ್‌ ನೀಡಿದೆ ಪಾಕ್‌

Pinterest LinkedIn Tumblr

Indian-spy-Drone

ಇಸ್ಲಾಮಾಬಾದ್‌: ಗಡಿಭಾಗದಲ್ಲಿ ಪಾಕಿಸ್ತಾನ ಹೊಡೆದುರುಳಿಸಿದ ಬೇಹುಗಾರಿಕಾ ಡ್ರೋನ್ ನಮ್ಮದಲ್ಲ ಎಂದು ಭಾರತ ಸ್ಪಷ್ಟಪಡಿಸಿದ್ದರೂ, ಈ ವಿಷಯವಾಗಿ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಯಭಾರಿಗೆ ಪಾಕಿಸ್ತಾನ ಗುರುವಾರ ಸಮನ್ಸ್‌ ನೀಡಿದೆ.

ಈ ಮಧ್ಯೆ, ಡ್ರೋನ್‌ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಪೊಲೀಸರಿಗೆ ಸೇರಿದ್ದು. ಹೆದ್ದಾರಿ ಕಣ್ಗಾವಲಿಗಾಗಿ ಅದನ್ನು ಬಳಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ತನ್ನದೇ ಡ್ರೋನ್‌ ಹೊಡೆದುರುಳಿಸಿರುವ ಪಾಕಿಸ್ತಾನ ಸೇನಾ ಪಡೆ, ಅದು ಭಾರತಕ್ಕೆ ಸೇರಿದ್ದು ಎಂದು ಆರೋಪಿದೆ.

‘ಚಿತ್ರದಲ್ಲಿ ಕಾಣುವಂತೆ ಆ ಡ್ರೋನ್‌ ಚೀನಾದಲ್ಲಿ ತಯಾರಾದದ್ದು. ಚೀನಾದಿಂದ ಭಾರತ ಅಂಥ ಯಾವುದೇ ಡ್ರೋನ್‌ ಖರೀದಿಸಿಲ್ಲ. ಹಾಗಾಗಿ ಪಾಕಿಸ್ತಾನ ಸುಳ್ಳು ಆರೋಪ ಮಾಡುತ್ತಿದೆ, ರಾಜತಾಂತ್ರಿಕ ಮಾರ್ಗಗಳ ಮೂಲಕ ಭಾರತ ಇದಕ್ಕೆ ಸೂಕ್ತ ಉತ್ತರ ನೀಡಲಿದೆ,’ ಎಂದು ಮೂಲಗಳು ತಿಳಿಸಿವೆ.

ನಿಯಂತ್ರಣ ರೇಖೆಯ ಸಮೀಪ ಪಾಕ್ ಆಕ್ರಮಿತ ಪ್ರದೇಶದ ಭಿಮ್‌ಬೇರ್ ಪ್ರದೇಶದ ಚಿತ್ರೀಕರಣವನ್ನು ಡ್ರೋನ್ ಮೂಲಕ ಭಾರತ ನಡೆಸುತ್ತಿತ್ತು. ಅದನ್ನು ನಾಶಪಡಿಸಲಾಗಿದೆ ಎಂದು ಪಾಕಿಸ್ತಾನ ಬುಧವಾರ ಹೇಳಿತ್ತು.

ರಷ್ಯಾದ ಯೂಫಾದಲ್ಲಿ ಮೋದಿ ಮತ್ತು ಷರೀಫ್ ನಡುವೆ ಸಂಬಂಧ ಸುಧಾರಣೆಯ ಮಾತುಕತೆ ನಡೆದ ಒಂದು ವಾರದ ನಂತರ ಈ ಘಟನೆ ನಡೆದಿದೆ.

Write A Comment