ಅಂತರಾಷ್ಟ್ರೀಯ

ಶ್ರೇಯಾಳ ಗರಂ ಮಸಾಲಾ ಬರ್ಗರ್‌ಗೆ ಮನಸೋತ ಒಬಾಮಾ ದಂಪತಿ !

Pinterest LinkedIn Tumblr

Shreya-Patel

ನ್ಯೂಯಾರ್ಕ್‌: ಭಾರತೀಯ ಮೂಲದ ಅಮೆರಿಕ ವಾಸಿ 9 ವರ್ಷದ ಶ್ರೇಯಾ ತಯಾರಿಸಿದ್ದ ಗರಂ ಮಸಾಲಾ ಬರ್ಗರ್‌ಗೆ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಹಾಗೂ ಪತ್ನಿ ಮಿಶೆಲ್‌ ಒಬಾಮಾ ಫಿದಾ ಆಗಿದ್ದಾರೆ.

ಶ್ವೇತ ಭವನದಲ್ಲಿ ಇತ್ತೀಚೆಗೆ ನಡೆದ ನಾಲ್ಕನೇ ವಾರ್ಷಿಕ ಮಕ್ಕಳ ಭೋಜನ ಕೂಟದಲ್ಲಿ ಇಲಿನಾಯ್ಸ್‌ನ ಶ್ರೇಯಾ ಪಟೇಲ್‌ ಸೇರಿ 55 ಮಕ್ಕಳು ಭಾಗವಹಿಸಿದ್ದರು. ಆರೋಗ್ಯಕರ ಆಹಾರ ಸೇವನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಆಯೋಜಿಸುವ ಮಕ್ಕಳ ಅಡುಗೆ ಸ್ಪರ್ಧೆಯ ವಿಜೇತರನ್ನು ಕೂಟಕ್ಕೆ ಆಹ್ವಾನಿಸಲಾಗಿತ್ತು.

ಸ್ಪರ್ಧೆಯಲ್ಲಿ ಇಲಿನಾಯ್ಸ್‌ ಪ್ರಾಂತ್ಯದಿಂದ ಆಯ್ಕೆಯಾದ ಶ್ರೇಯಾ, ಜುಲೈ 10ರಂದು ಶ್ವೇತಭವನದಲ್ಲಿ ನಡೆದ ಭೋಜನಕೂಟದಲ್ಲಿ ಪಾಲ್ಗೊಂಡಿದ್ದಳು. ಸ್ಪರ್ಧೆಯಲ್ಲಿ 1000ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು. ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಭೋಜನ ಕೂಟದಲ್ಲಿ ಪಾಲ್ಗೊಂಡಿರುವ ಮೊದಲ ಭಾರತೀಯ ಮೂಲದ ಬಾಲಕಿ ಶ್ರೇಯಾ ಎಂಬುದು ವಿಶೇಷ.

‘ತಾಯಿ ಮತ್ತು ಅಜ್ಜಿ ಕೈ ರುಚಿ ತಿಂದು ಬೆಳೆದವಳು, ಅವರಿಂದಲೇ ಭಾರತೀಯ ಅಡುಗೆಗಳನ್ನು ಕಲಿತಿದ್ದೇನೆ,’ ಎಂದಿದ್ದಾಳೆ ಶ್ರೇಯಾ. ಸ್ಪರ್ಧೆಯಲ್ಲಿ ಗರಂ ಮಸಾಲಾ ಬರ್ಗರ್‌, ರಾಯತ ಸೇವಿಸಿದ ಒಬಾಮಾ ದಂಪತಿ ಶ್ರೇಯಾಳನ್ನು ಹಾಡಿ ಹೊಗಳಿದ್ದರು.

Write A Comment