ರಾಷ್ಟ್ರೀಯ

ಎಎಪಿ ಶಾಸಕಿಯ ಪತಿಗೆ ನಿರೀಕ್ಷಣಾ ಜಾಮೀನು

Pinterest LinkedIn Tumblr

banadana-kumariನವದೆಹಲಿ: ನೇಮಕಾತಿಗಾಗಿ ಶಾಲಾ ಪ್ರಾಂಶುಪಾಲರ ಮೇಲೆ ಒತ್ತಡ ಹೇರಿದ ಆರೋಪದ ಮೇಲೆ ದೆಹಲಿಯ ಆಡಳಿತ ಪಕ್ಷ ಎಎಪಿಯ ಶಾಸಕಿ ಬಂದನ ಕುಮಾರಿ ಅವರ ಪತಿ ಸಜ್ಜನ್ ಕುಮಾರ್ ಅವರಿಗೆ ಕೋರ್ಟ್ ಮಂಗಳವಾರ ನಿರೀಕ್ಷಣಾ ಜಮೀನು ನೀಡಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಮೂರ್ತಿ ಪವನ್ ಕುಮಾರ್ ಜೈನ್, ಸಜ್ಜನ್ ಕುಮಾರ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿ ತನಿಖೆಗೆ ಸಹಕರಿಸುವಂತೆ ಸೂಚಿಸಿದ್ದಾರೆ.

ತನ್ನ ಕಕ್ಷಿದಾರ ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದ್ದು, ತನಿಖೆಯನ್ನು ಯಾವುದೇ ರೀತಿಯಲ್ಲಿ ದಾರಿತಪ್ಪಿಸುವುದಿಲ್ಲ ಎಂದು ಆರೋಪಿಯ ವಕೀಲ ಸಿ ಎಲ್ ಗುಪ್ತಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಶನಿವಾರ ನೀಡಿದ್ದ ಲಿಖಿತ ದೂರಿನಲ್ಲಿ ಸರ್ವೋದಯ ವಿದ್ಯಾಲಯದ ಪ್ರಾಂಶುಪಾಲರಾದ ರಂಜಿತ್ ಸಿಂಗ್ ಅವರು ಸಜ್ಜನ್ ಕುಮಾರ್ ತಮ್ಮ ಜೊತೆ ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿದ್ದಾಗಿ ತಿಳಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸೆಕ್ಷನ್ ೧೪೬(ಗಲಭೆ), ೩೫೩ (ಸಾರ್ವಜನಿಕ ಅಧಿಕಾರಿಯ ಮೇಲೆ ಹಲ್ಲೆ) ಮತ್ತು ೫೦೬/೩೪ (ಬೆದರಿಕೆ ಅಪರಾಧಕ್ಕಾಗಿ ಶಿಕ್ಷೆ) ಅಡಿ ಸಜ್ಜನ್ ಕುಮಾರ್ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment