ರಾಷ್ಟ್ರೀಯ

ವಿಜಯ್‌ ಮಲ್ಯಗೆ 10 ಲಕ್ಷ ರೂ.ದಂಡ ವಿಧಿಸಿದ ಸುಪ್ರೀಂ ! ವಿಷಯ ಏನು ಮುಂದೆ ಓದಿ…

Pinterest LinkedIn Tumblr

vijay

ನವದೆಹಲಿ (ಪಿಟಿಐ): ವಿದೇಶಿ ವಿನಿಮಯ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಕ್ರಿಮಿನಲ್‌ ಪ್ರಕರಣ ಕೈಬಿಡಬೇಕೆಂದು ಯುಬಿ ಸಮೂಹದ ಮುಖ್ಯಸ್ಥ ವಿಜಯ್‌ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಸೋಮವಾರ ತಳ್ಳಿ ಹಾಕಿದೆ.

ಜೆ.ಎಸ್‌. ಖೇಹರ್‌ ಅವರ ನೇತೃತ್ವದ ಪೀಠ, ಅರ್ಜಿಯನ್ನು ವಜಾಗೊಳಿಸಿದ್ದು, ಈ ಪ್ರಕರಣದಲ್ಲಿ ಮಲ್ಯ ಅವರಿಗೆ 10 ಲಕ್ಷ ದಂಡ ವಿಧಿಸಿದೆ. ಜಾರಿ ನಿರ್ದೇಶನಾಲಯದ ತನಿಖೆ ಮುಂದುವರಿಯಲಿದೆ ಎಂದು ಕೋರ್ಟ್‌ ತಿಳಿಸಿದೆ. ಮಲ್ಯ ಅವರು ದೆಹಲಿ ಹೈಕೋರ್ಟ್‌ನ ತೀರ್ಪು ಪ್ರಶ್ನಿಸಿ, ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು.

ಪ್ರಕರಣದ ಹಿನ್ನೆಲೆ: ಮಲ್ಯ ಅವರು ವಿದೇಶದಲ್ಲಿ ಕಿಂಗ್‌ಫಿಶರ್‌ ಬ್ರಾಂಡ್‌ನ ಪ್ರಚಾರಕ್ಕಾಗಿ ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ (ಎಫ್‌ಇಆರ್‌ಎ) ಉಲ್ಲಂಘಿಸಿ ಬಂಡವಾಳ ಸಂಗ್ರಹಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ಇದಕ್ಕೆ ಸಂಬಂಧಿಸಿದಂತೆ ಯುಬಿ ಸಮೂಹ 1995ರಲ್ಲಿ ಲಂಡನ್‌ ಮೂಲದ ಬೆನೆಟನ್‌ ಫಾರ್ಮುಲಾ ಸಂಸ್ಥೆ ಜತೆಗೆ ಒಪ್ಪಂದ ಮಾಡಿಕೊಂಡಿತ್ತು. ಫಾರ್ಮುಲಾ ವನ್‌ ಚಾಂಪಿಯನ್‌ಶಿಪ್‌ ನಡೆಯುವ ಸ್ಥಳಗಳಲ್ಲಿ ಕಿಂಗ್‌ಫಿಶರ್‌ ಲೋಗೊ ಪ್ರದರ್ಶಿಸುವಂತೆ ಮಲ್ಯ ಅವರು ಈ ಸಂಸ್ಥೆ ಜತೆಗೆ ಒಪ್ಪಂದ ಮಾಡಿಕೊಂಡಿದ್ದರು ಇದಕ್ಕಾಗಿ 2 ಲಕ್ಷ ಡಾಲರ್‌ ನೀಡಿದ್ದರು ಎಂದು ಜಾರಿ ನಿರ್ದೇಶನಾಲಯ ನೋಟಿಸ್‌ ಜಾರಿಗೊಳಿಸಿತ್ತು.

Write A Comment