ಹುಬ್ಬಳ್ಳಿ : ರಾಜ್ಯದಲ್ಲಿ ದಿನದಿಂದ ದಿನಕ್ಕೆ ರೈತರು ಸಾಲಭಾದೆಯಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದೇ ವೇಳೆ ‘ಮಾರ್ವಾಡಿಗಳ ಹತ್ತಿರ ಮಾಡಿಕೊಂಡ ಸಾಲ ತೀರಿಸಲಾಗದೆ ರೈತರು ಆತ್ಮಹತ್ಯೆ ಮಾಡಿಕೊಂಡರೆ ಸರ್ಕಾರ ಏನ್ ಮಾಡಲಿಕ್ಕಾಗುತ್ತದೆ’ ಎಂದು ತೋಟಗಾರಿಕಾ ಸಚಿವ ಶ್ಯಾಮನೂರು ಶಿವಶಂಕರಪ್ಪ ಉಡಾಫೆ ಉತ್ತರ ನೀಡಿದ್ದಾರೆ.
ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ‘ರೈತರ ಆತ್ಮಹತ್ಯೆಗೂ ತೋಟಗಾರಿಕಾ ಇಲಾಖೆಗೂ ಯಾವುದೇ ಸಂಬಂಧವಿಲ್ಲ . ರೈತರು ಮಾರ್ವಾಡಿಗಳ ಬಳಿ ದುಪ್ಪಟ್ಟು ಬಡ್ಡಿಗೆ ಸಾಲ ಪಡೆದು ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ .ಇದಕ್ಕೆ ನಾವೇನು ಮಾಡಲಿಕ್ಕಾಗುತ್ತದೆ. ನೀವೇ ಹೇಳಿ’ ಎಂದು ಮರು ಪ್ರಶ್ನಿಸಿದರು.
ಶಿವಶಂಕರಪ್ಪ ಅವರ ಹೇಳಿಕೆಗೆ ರೈತ ಮುಖಂಡರು ತೀವ್ರ ಆಕ್ರೋಶವ್ಯಕ್ತಪಡಿಸಿದ್ದು, ರೈತರಲ್ಲಿ ಕ್ಷಮೆ ಯಾಚಿಸಲು ಆಗ್ರಹಿಸಿದ್ದಾರೆ.
-ಉದಯವಾಣಿ