ರಾಷ್ಟ್ರೀಯ

ವಿಭಿನ್ನವಾಗಿರಲಿ ಕಾಟನ್ ಸೀರೆ

Pinterest LinkedIn Tumblr

13– ಭಾಗ್ಯ ನಂಜುಂಡಸ್ವಾಮಿ
ಇತ್ತೀಚಿನ ದಿನಗಳಲ್ಲಿ ಸೀರೆ ಉಡುವುದು ಒಂದು ರೀತಿಯ ಫ್ಯಾಷನ್. ಅದರಲ್ಲೂ ಕಾಟನ್ ಸೀರೆಗಳನ್ನು ಉಡುವವರ ಸಂಖ್ಯೆ ಹೆಚ್ಚಾಗಿದೆ. ಕಾಟನ್ ಸೀರೆಯನ್ನು ನಿರ್ವಹಣೆ ಮಾಡುವುದು ಕಷ್ಟಕರ. ಹಾಗೆಂದುಕೊಂಡು ಕಾಟನ್ ಸೀರೆಯನ್ನು ಉಡದೇ ಇರಲೂ ಕೂಡಾ ಮನಸ್ಸು ಒಪ್ಪುವುದಿಲ್ಲ. ಬಗೆಬಗೆ ರೂಪದ, ಹಲವು ವಿನ್ಯಾಸದ ಕಾಟನ್ ಸೀರೆಗಳು ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ ಅವುಗಳನ್ನು ಬಳಸದಿರಲೂ ಕೂಡಾ ಆಗುವುದಿಲ್ಲ. ಸರಿಯಾದ ರೀತಿಯಲ್ಲಿ ಕಾಟನ್ ಸೀರೆಗಳನ್ನು ಉಡುವುದರಿಂದ ನಿಮ್ಮ ಅಂದ-ಚೆಂದ ಹೆಚ್ಚಾಗುವುದರಲ್ಲಿ ಯಾವುದೇ ಸಂದೇಹ ಬೇಡ.

ಸೀರೆಯನ್ನು ಉಡುವ ವಿಧಾನ ಕಾಟನ್ ಸೀರೆಯನ್ನು ಇತರೆ ಎಲ್ಲಾ ಸೀರೆಗಳಂತೆ ಉಡುವುದಕ್ಕಿಂತಲೂ ಸ್ವಲ್ಪ ವಿಭಿನ್ನವಾಗಿ ಉಡಬೇಕು. ಇತರೆ ಪಾಲಿಯೆಸ್ಟರ್ ಅಥವಾ ಜಾರ್ಜೆಟ್, ಸಿಂಥೆಟಿಕ್ ಸೀರೆಗಳನ್ನು ಉಡುವಂತೆ ಸುಲಭವಾಗಿ ಉಡಲು ಆಗುವುದಿಲ್ಲ. ಕಾಟನ್ ಸೀರೆಗಳಲ್ಲಿ ತೆಳು ಮತ್ತು ದಪ್ಪ ಕ್ವಾಲಿಟಿಯ ಸೀರೆಗಳು ಲಭ್ಯವಿರುವುದರಿಂದ, ತೆಳುವಾದ ಸಿರೆಗಳನ್ನು ಉಡುವಾಗ ಹೆಚ್ಚು ಎಚ್ಚರಿಕೆ ಅಗತ್ಯ. ಮಾಮೂಲಿ ಸೀರೆಗಳಂತೆ, ಕಾಟನ್ ಸೀರೆಯನ್ನು ಮೊದಲ ಸುತ್ತು ಸುತ್ತಿ, ಆನಂತರ ನೆರಿಗೆ ಹಿಡಿಯುವಾಗ ಅಗಲವಾದ ನೆರಿಗೆಗಳನ್ನು ಹಿಡಿದು, ಅದಕ್ಕೆ ಸ್ಯಾರಿ ಪಿನ್ ಅಳವಡಿಸಬೇಕು. ಸೆರಗಿಗೆ ಪಿನ್ ಹಾಕುವಾಗಲೂ ಕೂಡಾ, ತುಂಬಾ ಅಗಲವಾದ ನೆರಿಗೆಗಳನ್ನು ಹಾಕುವುದಕ್ಕಿಂತಲೂ, ಚಿಕ್ಕ-ಚಿಕ್ಕ ನೆರಿಗೆಗಳನ್ನು ಹಿಡಿದು, ಆನಂತರ, ಇವನ್ನೆಲ್ಲಾ ಒಟ್ಟು ಸೇರಿಸಿ, ಭುಜದ ಹಿಂಭಾಗದಲ್ಲಿ ಸೆರಗಿಗೆ ಪಿನ್ ಹಾಕಬೇಕು. ಅಥವಾ ಮುಂಭಾಗದಲ್ಲಿ ಸಿಂಗಲ್ ಲೇನ್ ಸೆರಗನ್ನು ಹಾಕಿ, ಭುಜದ ಕೆಳಭಾಗದಲ್ಲಿ ಪಿನ್ ಹಾಕಿ, ಆನಂತರ, ಉಳಿದ ಸೆರಗನ್ನೆಲ್ಲಾ ಒಟ್ಟು ಮಾಡಿ, ನೆರಿಗೆ ಹಿಡಿದು ಪಿನ್ ಹಾಕಿದರೆ, ಚೆನ್ನಾಗಿ ಕಾಣುತ್ತದೆ. ಸೀಸನ್ ವೇರ್ ಸೀರೆಗಳನ್ನು ಆಯಾ ಸೀಸನ್ ಗಳಲ್ಲಿ ಧರಿಸುವುದು ಸೂಕ್ತ. ಕಾಟನ್ ಸೀರೆಗೆ ಅಗಲವಾದ ಬಾರ್ಡರ್ ಇದ್ದಾಗ, ಅಂತಹ ಸಂದರ್ಭದಲ್ಲಿ ಸಿಂಗಲ್ ಲೇನ್ ಸೆರಗು ಹಾಕುವುದು ಸೂಕ್ತ. ಕೆಲವು ಸೀರೆಗಳನ್ನು ಧರಿಸಿದಾಗ ಅಗಲವಾಗಿ ಹರಡಿಕೊಳ್ಳುತ್ತದೆ. ಆದುದರಿಂದ, ಇಂತಹ ಸೀರೆಗಳು ಧರಿಸುವಾಗ ಐರನ್ ಮಾಡಿಯೇ ಉಟ್ಟುಕೊಳ್ಳಬೇಕು.

ಕಾಟನ್ ಸೀರೆಗಳಿಗೆ ಇಸ್ತ್ರಿ ಅವಶ್ಯ ಕಾಟನ್ ಸೀರೆಗಳನ್ನು ಇಸ್ತ್ರಿ ಮಾಡದೇ ಉಡಲು ಬರುವುದೇ ಇಲ್ಲ. ಅತ್ಯುತ್ತಮ ಕ್ವಾಲಿಟಿಯ ಸೀರೆಗಳಲ್ಲಿ ಕೆಲವು ಕಾಟನ್ ಸೀರೆಗಳಿಗೆ ಪ್ರತಿಬಾರಿ ಐರನ್‌ನ ಅವಶ್ಯಕತೆ ಇಲ್ಲದಿರಬಹುದು. ಕಾಟನ್ ಸೀರೆಗಳಿಗೆ ಇಸ್ತ್ರಿ ಮಾಡುವಾಗ ಹೆಚ್ಚಿನ ಶಾಖ ಅಗತ್ಯ. ಒಮ್ಮೆ ಸೀರೆಯನ್ನು ಸಂಪೂರ್ಣವಾಗಿ ಬಿಚ್ಚಿ, ಆನಂತರ ಸಿಂಗಲ್ ಲೇಯರ್‌ನಲ್ಲಿ ಇಸ್ತ್ರಿ ಮಾಡಿದರೆ, ಸೀರೆ ಉಟ್ಟಾಗ ಚೆನ್ನಾಗಿ ಕಾಣುತ್ತದೆ. ಹೊಸದಾಗಿ ಮಾರುಕಟ್ಟೆಯಿಂದ ತಂದಂತಹ ಸೀರೆಗಳನ್ನು ಕೂಡಾ ಒಮ್ಮೆ ಇಸ್ತ್ರಿ ಮಾಡಿ ಉಡುವುದು ಸೂಕ್ತ. ಒಮ್ಮೆ ಉಟ್ಟು ಬಿಚ್ಚಿದಂತಹ ಸೀರೆಗಳನ್ನು ಪುನಃ ಉಡಬೇಕಾದಂತಹ ಅನಿವಾರ್ಯತೆ ಉಂಟಾದಾಗ, ಸುಕ್ಕು ಸುಕ್ಕಾದ ಭಾಗಗಳಿಗೆ ಮಾತ್ರ ಇಸ್ತ್ರಿ ಮಾಡಿದರೆ ಸಾಕಾಗುತ್ತದೆ. ಸೀರೆಗಳ ಬಾರ್ಡರ್ ಗೆ ಇಸ್ತ್ರಿಯನ್ನು ಮಾಡುವಾಗ ಜಾಸ್ತಿ ಹೀಟ್ ಅಗತ್ಯ. ಕೆಲವು ತೆಳುವಾದ ಸೀರೆಗಳಿಗೆ ಇಸ್ತ್ರಿ ಮಾಡುವಾಗ, ಸೀರೆಯ ಮೇಲೆ ಸ್ವಲ್ಪ ನೀರನ್ನು ಚಿಮುಕಿಸಿ, ಆನಂತರ ಇಸ್ತ್ರಿಯನ್ನು ಮಾಡಬೇಕು. ಕಾಟನ್ ಸೀರೆಗಳನ್ನು ಬಹಳ ಬೇಗ ಉಡಲು ಆಗುವುದಿಲ್ಲವಾದ್ದರಿಂದ, ಸೀರೆಗಳನ್ನು ಉಡುವ ಇಂದಿನ ದಿನವೇ ಸೀರೆಯ ನೆರಿಗೆಗಳನ್ನು ಒಂದೇ ಸಮನಾಗಿ ಹಿಡಿದು, ಅದರ ಮೇಲೆ ಇಸ್ತ್ರಿಯನ್ನು ಮಾಡಿಕೊಳ್ಳಬೇಕು. ಹಾಗೆಯೇ ಪಿನ್ ಕೂಡಾ ಮಾಡಿದರೆ, ಸೀರೆಯನ್ನು ಉಡಲು ಸುಲಭವಾಗುತ್ತದೆ. ಅದೇ ರೀತಿಯಾಗಿ, ಸೀರೆಯ ಸೆರಗನ್ನು ನಿಮಗೆ ಯಾವ ರೀತಿಯಲ್ಲಿ ಬೇಕೋ, ಆ ರೀತಿಯಲ್ಲಿ ಸೆರಗಿನ ನೆರಿಗೆಯನ್ನು ಒಟ್ಟು ಮಾಡಿ ಪಿನ್ ಹಾಕಿ, ಐರನ್ ಮಾಡಿದರೆ, ಸೀರೆಯನ್ನು ಉಟ್ಟುಕೊಳ್ಳುವಾಗ ಯಾವುದೇ ರೀತಿಯ ಸಮಸ್ಯೆಯುಂಟಾಗುವುದಿಲ್ಲ.

* ಬಾಲಿವುಡ್ ಸ್ಟಾರ್ಸ್‌ ಫ್ಯಾಷನ್ ಸ್ಟೇಟ್‌ಮೆಂಟ್‌ಗಳು ಆಯಾ ಸೀಸನ್‌ಗೆ ತಕ್ಕಂತೆ ಬದಲಾಗುತ್ತಿರುತ್ತವೆ. ಅವರ ವಾರ್ಡ್‌ರೋಬ್ ಕೂಡ ಆಗಾಗ್ಗೆ ಬದಲಾಗುತ್ತವೆ. ಇವೆಲ್ಲವನ್ನು ನಿಭಾಯಿಸುವುದು ಅವರ ಪರ್ಸನಲ್ ಸ್ಟೈಲಿಸ್ಟ್ಸ್.

* ನೇಲ್ ಆರ್ಟ್ ಮಾಡಿಸುವ ಮುನ್ನ ಮೆನಿಕ್ಯೂರ್ ಮಾಡಿಸಿಕೊಳ್ಳಿ. ಪರಿಣಾಮ, ನೇಲ್‌ಆರ್ಟ್ ಮಾಡಿದ ನಂತರ ಡಿಸೈನ್ ನೋಡಲು ಆಕರ್ಷಕವಾಗಿ ಕಾಣುತ್ತವೆ.

Write A Comment