ರಾಷ್ಟ್ರೀಯ

ಬಂಧಿತರಲ್ಲಿ 900 ಮಂದಿ ವಿದ್ಯಾರ್ಥಿಗಳು- ಅಭ್ಯರ್ಥಿಗಳು!

Pinterest LinkedIn Tumblr

Vyapam-scama

ಭೋಪಾಲ್, ಜು.9: ವ್ಯಾಪಂ ಹಗರಣ ಹಾಗೂ ಅದಕ್ಕೆ ಸಂಬಂಧಿಸಿದ 35 ಮಂದಿಯ ಸಾವು, ಶಿವರಾಜ್‌ಸಿಂಗ್ ಚೌಹಾಣರ ಸರಕಾರವು, ಮಧ್ಯಪ್ರದೇಶದಲ್ಲಿ ವಿಶ್ವಾಸಘಾತುಕ ಪಿತೂರಿಯ ಆರೋಪದ ವಿರುದ್ಧ ಹೋರಾಡಬೇಕಾದ ಸ್ಥಿತಿಗೆ ತಂದಿದೆ.

ವಿವಾದದ ಕುರಿತು 10 ಅಂಶಗಳ ಮಾರ್ಗದರ್ಶಿಕೆ ಇಲ್ಲಿದೆ:
ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಬಯಸುವವರು ಲಂಚ ನೀಡುತ್ತಿದ್ದಾರೆಂಬ ವರದಿಗಳೊಂದಿಗೆ 2013ರಲ್ಲಿ ಈ ಹಗರಣ ಸ್ಫೋಟಿಸಿತು. ಈ ಲಂಚಕ್ಕೆ ಬದಲಾಗಿ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಇತರರು ನಕಲಿ ವ್ಯಕ್ತಿಗಳಿಗೆ ಪ್ರವೇಶ ಪರೀಕ್ಷೆ ಬರೆಯಲು ಅವಕಾಶ ನೀಡಿದರು.

ಅದೇ ರೀತಿ, ಸರಕಾರಿ ಅಧ್ಯಾಪಕರು ಹಾಗೂ ವೈದ್ಯರ ಕೆಲಸಗಳ ನೇಮಕಾತಿ ಪರೀಕ್ಷೆ ಬರೆಯಲು ಬದಲಿ ಅಭ್ಯರ್ಥಿಗಳನ್ನು ಉಪಯೋಗಿಸಲಾಗಿತ್ತು.

ಹಗರಣದ ತನಿಖೆ ಆರಂಭವಾದ ಬಳಿಕ, 35 ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ ಸಾಕ್ಷಿಗಳು, ಆರೋಪಿಗಳು, ತನಿಖೆಗೆ ನೆರವಾದವರು ಹಾಗೂ ಹಗರಣದ ಬಗ್ಗೆ ವರದಿ ಮಾಡುತ್ತಿದ್ದ ಪತ್ರಕರ್ತರು ಸೇರಿದ್ದಾರೆ.

2013ರ ಆಗಸ್ಟ್‌ನಿಂದ ಮಧ್ಯಪ್ರದೇಶ ಪೊಲೀಸ್‌ನ ವಿಶೇಷ ಕಾರ್ಯ ಪಡೆಯೊಂದು ತನಿಖೆ ನಡೆಸುತ್ತ ಬಂದಿದೆ. ಈಗ, ಮುಖ್ಯಮಂತ್ರಿ ಚೌಹಾಣ್ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಬಯಸಿದ್ದಾರೆ. ರಾಜ್ಯದ ತನಿಖೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಮಧ್ಯಪ್ರದೇಶ ಹೈಕೋರ್ಟ್ ಈ ಮನವಿಯನ್ನು ಅಂಗೀಕರಿಸಬೇಕಾಗಿದೆ.

ಹಗರಣದಲ್ಲಿ ಸುಮಾರು, 2,500 ಆರೋಪಿಗಳಿದ್ದಾರೆ. ಸುಮಾರು 2 ಸಾವಿರ ಮಂದಿಯನ್ನು ಬಂಧಿಸಲಾಗಿದೆ. ಉಳಿದವರು ತಲೆಮರೆಸಿಕೊಂಡಿದ್ದಾರೆಂದು ಪೊಲೀಸರು ನ್ಯಾಯಾಲಯದಲ್ಲಿ ಹೇಳಿದ್ದಾರೆ.

ಬಂಧಿತರಲ್ಲಿ ಸುಮಾರು 900 ಮಂದಿ ವಿದ್ಯಾರ್ಥಿಗಳು ಅಥವಾ ಸರಕಾರಿ ಉದ್ಯೋಗದ ಅಭ್ಯರ್ಥಿಗಳು, ಬಂಧಿತರಲ್ಲಿ 450 ಮಂದಿ, ಸರಕಾರಿ ಕಾಲೇಜುಗಳಲ್ಲಿ ಸ್ಥಾನ ಅಥವಾ ಸರಕಾರಿ ವೈದ್ಯರು ಮತ್ತು ಅಧ್ಯಾಪಕರ ಹುದ್ದೆಗಳನ್ನು ಬಯಸಿದ್ದ ವಿದ್ಯಾರ್ಥಿಗಳು ಅಥವಾ ಅಭ್ಯರ್ಥಿಗಳ ಹೆತ್ತವರಾಗಿದ್ದಾರೆ. ತನಿಖೆಯ ಅಂಗವಾಗಿ ಇದುವರೆಗೆ 56 ಎಫ್‌ಐಆರ್ ಅಥವಾ ಪೊಲೀಸ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಹಗರಣದಲ್ಲಿ 77 ಲಕ್ಷ ಅಭ್ಯರ್ಥಿಗಳು ಲಂಚ ಪಾವತಿಸಿದ್ದಾರೆಂದು ವಿಪಕ್ಷ ಕಾಂಗ್ರೆಸ್ ಆರೋಪಿಸಿದೆ.

Write A Comment