ರಾಷ್ಟ್ರೀಯ

ಜನನ ಪ್ರಮಾಣಪತ್ರದಲ್ಲಿ ತಂದೆ ಹೆಸರು ಕಡ್ಡಾಯವಲ್ಲ: ಸುಪ್ರೀಂ

Pinterest LinkedIn Tumblr

1ಹೊಸದಿಲ್ಲಿ: ವಿವಾಹೇತರ ಸಂಬಂಧದಲ್ಲಿ ಜನಿಸಿದ ಮಗುವಿನ ಜನನ ಪ್ರಮಾಣ ಪತ್ರದಲ್ಲಿ ತಂದೆ ಹೆಸರು ದಾಖಲಿಸುವುದನ್ನು ಕಡ್ಡಾಯಗೊಳಿಸಬೇಡಿ ಎಂದು ಪಾಲಿಕೆ ಸಂಸ್ಥೆಗಳಿಗೆ ಸುಪ್ರೀಂಕೋರ್ಟ್‌ ನಿರ್ದೇಶಿಸಿದೆ.

ಇಂದಿನ ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಒಂಟಿಯಾಗಿ ಮಕ್ಕಳನ್ನು ಬೆಳೆಸಲು ಬಯಸುತ್ತಾರೆ, ಬದಲಾದ ಕಾಲಘಟ್ಟದಲ್ಲಿ ವಾಸ್ತವವನ್ನು ಒಪ್ಪಿಕೊಂಡು ಕಾನೂನು ಸಹ ಬದಲಾಗಬೇಕು ಎಂದು ಸುಪ್ರೀಂಕೋರ್ಟ್‌ ಹೇಳಿದೆ.

‘ಸಿಂಗಲ್‌ ಪೇರೆಂಟ್‌/ಅವಿವಾಹಿತ ತಾಯಿಂದಿರು ಮಗುವಿನ ಜನನ ಪ್ರಮಾಣ ಪ್ರತಕ್ಕಾಗಿ ಅರ್ಜಿ ಸಲ್ಲಿಸಿದಾಗ ಸಂಬಂಧಪಟ್ಟ ಅಧಿಕಾರಿಗಳು, ಆ ಮಗುವಿನ ತಂದೆಯ ಹೆಸರು ನಮೂದಿಸುವಂತೆ ಒತ್ತಾಯಿಸದೇ ಪ್ರಮಾಣ ಪತ್ರ ವಿತರಿಸಬೇಕು. ಕಾಲಕ್ಕೆ ತಕ್ಕಂತೆ ಕಾನೂನು ಸಹ ಬದಲಾಗಬೇಕು,’ ಎಂದು ಸುಪ್ರೀಂಕೋರ್ಟ್ ಪೀಠ ಹೇಳಿದೆ.

‘ಪ್ರತಿ ಮಗುವಿನ ಜನನ ಮಾಹಿತಿ ದಾಖಲಿಸಲು ಅಗತ್ಯ ಕ್ರಮ ಕೈಗೊಳ್ಳುವುದು ಸರಕಾರದ ಕರ್ತವ್ಯ. ಕೋರ್ಟ್‌ ಆದೇಶ ಇಲ್ಲದ ಸಂದರ್ಭದಲ್ಲಿ, ಜನನ ಪ್ರಮಾಣ ಪತ್ರ ನೀಡಲು ಯಾವುದೇ ಕಾರಣಕ್ಕೂ ನಿರಾಕರಿಸುವಂತಿಲ್ಲ,’ ಎಂದು ಕೋರ್ಟ್‌ ಹೇಳಿದೆ.

Write A Comment