ರಾಷ್ಟ್ರೀಯ

‘ಹನುಮಾನ್’ ಅವತಾರ ಬಾಲಕನ ‘ಬಾಲ’ಕ್ಕೆ ಯಶಸ್ವಿ ಶಸ್ತ್ರಚಿಕಿತ್ಸೆ

Pinterest LinkedIn Tumblr

hanuಮೊಹಾಲಿ: ಹನುಮಂತನ ಅವತಾರವೆಂದು ಸ್ಥಳೀಯರ ನಂಬಿಕೆಗೆ ಪಾತ್ರವಾಗಿದ್ದ ಬಾಲಕನ ಬಾಲವನ್ನು ವೈದ್ಯರು ಕೊನೆಗೂ ನಿವಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.

13 ವರ್ಷದ ಅರ್ಷಿದ್ ಅಲಿ ಖಾನ್ ಎಂಬ ಬಾಲಕನಿಗೆ ಬೆನ್ನಿನ ಕೆಳಭಾಗದಲ್ಲಿ ಬಾಲದಂತಹಾ ಅಂಗವೊಂದು ಬೆಳೆದಿತ್ತು. ಏಳು ಇಂಚು ಉದ್ದವಿದ್ದ ಈ ‘ಬಾಲ’ದಿಂದಾಗಿ ಅರ್ಷಿದ್‌ನನ್ನು ಸ್ಥಳೀಯರು ಹನುಮಂತನ ಅವತಾರ ಎಂದೇ ಪರಿಗಣಿಸಿ, ಆತನ ಆಶೀರ್ವಾದಕ್ಕಾಗಿ ಮುಗಿಬೀಳುತ್ತಿದ್ದರು.

ಈ ಹುಡುಗನನ್ನು ‘ಬಾಲಾಜಿ’ ಎಂದೇ ಸ್ಥಳೀಯರು ಗೌರವದಿಂದ ಕರೆಯುತ್ತಿದ್ದರು. ಸ್ಥಳೀಯ ಆಸ್ತಿಕರು ಈ ಹುಡುಗನ ಮನೆಯನ್ನೇ ಮಂದಿರವನ್ನಾಗಿ ಪರಿವರ್ತಿಸಿದ್ದರು. ಇಲ್ಲಿಗೆ ಬರುವ ಆತನ ‘ಭಕ್ತ’ರು, ‘ಬಾಲ’ವನ್ನು ಮುಟ್ಟಿ ನಮಸ್ಕರಿಸಿ, ಆಶೀರ್ವಾದ ಪಡೆದು ಹೋಗುತ್ತಿದ್ದರು.

“ಈಗ ನಮಗಂತೂ ತುಂಬಾ ಸಂತೋಷವಾಗಿದೆ. ಬಾಲಾಜಿಯ ಬಾಲ ತೆಗೆಯುವಲ್ಲಿ ವೈದ್ಯರ ಶ್ರಮವನ್ನು ಎಷ್ಟು ಹೊಗಳಿದರೂ ಸಾಲದು” ಎಂದಿದ್ದಾರೆ ಹುಡುಗನ ತಾತ ಇಕ್ಬಾಲ್ ಖುರೇಷಿ.

“ನಾನು ಮೊದಲು ಈ ವಿಷಯ ಊರಿನವರಿಗೆ ತಿಳಿಸಿದಾಗ, ಎಲ್ಲ ಧರ್ಮಗಳವರೂ ನನಗೆ ತಿಳಿ ಹೇಳಿದರು. ಈಗ, ಇದು ಭಗವಂತನ ರೂಪವೆಂದು ನನಗೂ ಅನ್ನಿಸಿತು” ಎಂದು ಖುರೇಷಿ ಹೇಳಿದ್ದಾರೆ.

ಇದು ಪತ್ತೆಹಚ್ಚಲಾಗದ ದೈಹಿಕ ನ್ಯೂನತೆ. ಈ ಬಾಲದಿಂದಾಗಿ ಬಾಲಕ ಅರ್ಷಿದ್ ಖಾನ್, ಸರಿಯಾಗಿ ನಡೆದಾಡಲಾಗದೆ ವೀಲ್ ಚೇರ್‌ನಲ್ಲೇ ಓಡಾಡಬೇಕಾಗುತ್ತಿತ್ತು. ಬಾಲಕ ಅರ್ಷಿದ್ ಶಾಲೆಗೇನೋ ಕಷ್ಟ ಪಟ್ಟು ಹೋಗುತ್ತಿದ್ದ. ಆದರೆ ರಜಾ ದಿನಗಳಲ್ಲಿ ಆತನ ಮನೆ ಮುಂದೆ ಜನರು ಸಾಲುಗಟ್ಟಿ ನಿಲ್ಲುತ್ತಿದ್ದರು. ‘ನಾನು ಜನರಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದೆ. ಅವರ ಬೇಡಿಕೆಗಳು ಈಡೇರುತ್ತಿದ್ದವು’ ಅಂತ ಸ್ವತಃ ಅರ್ಷಿದ್ ಖಾನ್ ಕಳೆದ ವರ್ಷ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದ್ದ.

‘ಮೊದಲು ನಾವು ವೈದ್ಯರೊಂದಿಗೆ ಮಾತನಾಡಿದಾಗ, ವೈದ್ಯರಿಗೂ ಧೈರ್ಯವಿರಲಿಲ್ಲ. ನಂತರ ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಗೆ ಹೋಗಲು ಹಿತಚಿಂತಕರೊಬ್ಬರು ಹೇಳಿದ ಬಳಿಕ, ಅಲ್ಲಿನ ವೈದ್ಯರು ಭರವಸೆ ನೀಡಿದರು’ ಎಂದು ಹೇಳಿರುವ ಇಕ್ಬಾಲ್ ಖುರೇಷಿ, ಈಗ ಈ ಬಾಲಕ ಉಳಿದವರಂತೆಯೇ ನಡೆದಾಡಬಹುದಾಗಿದೆ ಎಂದು ಖುಷಿಯಿಂದ ಹೇಳುತ್ತಾರೆ.

Write A Comment