ರಾಷ್ಟ್ರೀಯ

4 ಕೈ, 4 ಕಾಲು ಇರುವ ವಿಚಿತ್ರವಾದ ಮಗು ಜನನ !

Pinterest LinkedIn Tumblr

kanpur-child

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿಚಿತ್ರವಾದ ಮಗು ಜನಿಸಿದೆ. 4 ಕೈ, 4 ಕಾಲು ಇರುವ ಹೆಣ್ಣು ಮಗು ಶನಿವಾರ ದಫ್ರಿನ್ ಆಸ್ಪತ್ರೆಯಲ್ಲಿ ಹುಟ್ಟಿದೆ.

ಈ ರೀತಿಯ ಮಗು ಎಲ್ಲೂ ಜನಿಸದೇ ಇರುವುದನ್ನು ನೋಡಿ ಮಗುವಿನ ಕುಟುಂಬಸ್ಥರು ಸಾಕ್ಷಾತ್ ದೇವಿಯೇ ಮಗುವಿನ ರೂಪದಲ್ಲಿ ಧರೆಗೆ ಇಳಿದು ಬಂದಿದ್ದಾಳೆ ಎಂದು ಭಾವಿಸಿ ಆಕೆಗೆ ದೇವಿ ಎಂದು ನಾಮಕಾರಣ ಮಾಡಿದ್ದರು. ಆದರೆ ಮಗು ಹುಟ್ಟಿದ 10 ನಿಮಿಷದಲ್ಲಿ ಮೃತಪಟ್ಟಿದೆ.

ಇತ್ತೀಚೆಗೆ ಮುಂಬೈಯಲ್ಲಿ ಹುಟ್ಟಿದ ಮಗು ವಯಸ್ಸಾದವವರಂತೆ ಕಾಣುತ್ತಿದ್ದದ್ದಕ್ಕೆ ತಾಯಿಯೊಬ್ಬಳು ಎದೆ ಹಾಲು ನೀಡಲು ಹಿಂದೇಟು ಹಾಕಿದ ಘಟನೆ ಬೆಳಕಿಗೆ ಬಂದಿತ್ತು. ಅವಧಿಗಿಂತ ಮೊದಲೇ ಅಂದರೆ ಏಳು ತಿಂಗಳಲ್ಲಿ ಈ ಮಗು ಜನಿಸಿದ್ದು ತೂಕ ಕೇವಲ 800 ಗ್ರಾಂ ಇದ್ದ ಮಗು ವಯಸ್ಸಾದವವರಂತೆ ಕಾಣುತಿತ್ತು.

Write A Comment