ರಾಷ್ಟ್ರೀಯ

ವೇಶ್ಯೆಯರ ಸಂಗ ಮಾಡಿ ಶಿಕ್ಷೆಗೆ ಗುರಿಯಾದ ಯೋಧರು !

Pinterest LinkedIn Tumblr

wedಅಂತಾರಾಷ್ಟ್ರೀಯ ಶಾಂತಿಪಾಲನಾ ಪಡೆಯ ನಿಯೋಜನೆ ಸಮಯದಲ್ಲಿ ವೇಶ್ಯೆಯರ ಸಂಗ ಮಾಡಿದ ಇಬ್ಬರು ಭಾರತೀಯ ಯೋಧರು ಕಠಿಣ ಶಿಕ್ಷೆಗೆ ಗುರಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ದಕ್ಷಿಣ ಸುಡಾನ್ ಮತ್ತು ಕಾಂಗೋದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ನಿರ್ಬಂಧದ ಹೊರತಾಗಿಯೂ ಇವರಿಬ್ಬರು ಸ್ಥಳೀಯ ವೇಶ್ಯೆಯರ ಸಂಗ ಮಾಡಿದ್ದರು ಎನ್ನಲಾಗಿದ್ದು ಇದರ ಜತೆಗೆ 2010 ಮತ್ತು 2013ರಲ್ಲಿ ಶಾಂತಿಪಾಲನಾ ಪಡೆಯಲ್ಲಿ ನಿಯೋಜನೆಗೊಂಡಿದ್ದಾಗ ಇವರಿಬ್ಬರು ಅಶಿಸ್ತಿನ ವರ್ತನೆ ತೋರಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಭಾರತೀಯ ಸೇನಾಪಡೆ ಅಧಿಕಾರಿಗಳು ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಯೋಧರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿದ್ದು ಶಿಕ್ಷೆಗೆ ಗುರಿಯಾಗಿರುವ ಯೋಧರ ಹೆಸರು ಮತ್ತು ಶಿಕ್ಷಿಸಲ್ಪಟ್ಟ ರೀತಿಯ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.

Write A Comment