ರಾಷ್ಟ್ರೀಯ

ಕೆಲಸದವನ ಮೇಲಿನ ಹಲ್ಲೆ ಆರೋಪದಿಂದಾಗಿ ಸ್ವದೇಶಕ್ಕೆ ಮರಳಿಲ್ಲ: ಭಾರತೀಯ ರಾಯಭಾರಿ

Pinterest LinkedIn Tumblr

raviವೆಲ್ಲಿಂಗ್ಟನ್/ನವದೆಹಲಿ: ಮನೆ ಕೆಲಸದಾತನ ಮೇಲೆ ಹಲ್ಲೆ ನಡೆಸಿದ ಆರೋಪದಿಂದಾಗಿ ಸ್ವದೇಶಕ್ಕೆ ವಾಪಸ್ಸಾಗಿರುವ ನ್ಯೂಜಿಲೆಂಡ್ ನಲ್ಲಿರುವ ಭಾರತೀಯ ರಾಯಭಾರಿ ರವಿ ಥಾಪರ್ ಅವರು ಹಲ್ಲೆ ಆರೋಪಕ್ಕೆ ಹೆದರಿ ನ್ಯೂಜಿಲೆಂಡ್ ತೊರೆಯುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಕಳೆದ ವರ್ಷವಷ್ಟೇ ನನ್ನ ತಂದೆ ಅವರು ದಿವಂಗತರಾದರು. ಅಲ್ಲದೆ ನನ್ನ ತಾಯಿ ಅನಾರೋಗ್ಯ ಪೀಡಿತರಾಗಿದ್ದು, ಅವರ ಆರೈಕೆಗಾಗಿ ನಾನು ತಾಯ್ನಾಡಿಗೆ ಬಂದಿರುವುದಾಗಿ ಹೇಳಿದ್ದಾರೆ. ಇದೇ ವೇಳೆ ತಮ್ಮ ಪತ್ನಿ ವಿರುದ್ಧ ಬಂದಿರುವ ಆರೋಪವನ್ನು ತಳ್ಳಿಹಾಕಿರುವ ಅವರು, ”ಮನೆ ಕೆಲಸದವರ ಮೇಲೆ ಹಲ್ಲೆ ನಡೆಸುವಷ್ಟು ಅಜ್ಞಾನಿ ಅಲ್ಲ ನನ್ನ ಪತ್ನಿ, ಬೇರೆ ದೇಶಗಳಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ತಿಳಿವಳಿಕೆ ಆಕೆಗಿದೆ ಎಂದು ಹೇಳಿದ್ದಾರೆ.

ಕಳೆದ ಮೇ 10ರಂದೇ ಪ್ರಕರಣ ಭಾರತೀಯ ವಿದೇಶಾಂಗ ಸಚಿವಾಲಯದ ಗಮನಕ್ಕೆ ಬಂದಿದ್ದು, ಈ ಸಂಬಂಧ ತನಿಖೆ ನಡೆಸಲು ಅಧಿಕಾರಿಗಳನ್ನು ಈ ಹಿಂದೆಯೇ ನ್ಯೂಜಿಲೆಂಡ್‌ಗೆ ಕಳುಹಿಸಿಕೊಟ್ಟಿತ್ತು. ಅದರಂತೆ ಸದ್ಯಕ್ಕೆ ರವಿ ಥಾಪರ್ ಅವರನ್ನು ಔಪಚಾರಿಕವಾಗಿ ವಾಪಸ್ ಕರೆಸಿಕೊಳ್ಳಲಾಗಿದೆ ಎಂದು ಹೇಳಿದೆ.

ಅಂದಹಾಗೆ, 2013ರಲ್ಲಿ ಅಮೆರಿಕದಲ್ಲಿ ರಾಜತಾಂತ್ರಿಕ ಅಧಿಕಾರಿಯಾಗಿದ್ದ ದೇವಯಾನಿ ಖೋಬ್ರಗದೆ ಅವರ ಮೇಲೂ ಇದೇ ತೆರನಾದ ಆರೋಪ ಕೇಳಿಬಂದಿತ್ತು.

ಶರ್ಮಿಳಾ ಥಾಪರ್ ಅವರ ಮನೆ ಕೆಲಸದಾತ ನಿವಾಸದಿಂದ ತಪ್ಪಿಸಿಕೊಂಡು ವೆಲ್ಲಿಂಗ್ಟನ್‌ನ ಪ್ರಮುಖ ಬೀದಿಯಲ್ಲಿ ಯಾತನೆಯ ಸ್ಥಿತಿಯಲ್ಲಿ ಅಲೆಯುತ್ತಿದ್ದ. ಆತನ ಪರಿಸ್ಥಿತಿ ಕಂಡ ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ, ”ನಾನು ಥಾಪರ್ ಮನೆಯಲ್ಲಿ ಬಾಣಸಿಗನಾಗಿ ದುಡಿಯುತ್ತಿದ್ದು, ಅವರ ಪತ್ನಿ ಶರ್ಮಿಳಾ ಪ್ರತಿ ದಿನ ಚಿತ್ರ ಹಿಂಸೆ ನೀಡುತ್ತಿದ್ದರು. ಗುಲಾಮನಂತೆ ನಡೆಸಿಕೊಳ್ಳುತ್ತಿದ್ದರು,” ಎಂದು ಆರೋಪಿಸಿದ್ದ.

Write A Comment