ರಾಷ್ಟ್ರೀಯ

ಪ್ರಧಾನಿ ಮೋದಿಯನ್ನು ‘ಬುದ್ಧಿವಂತ’ ಎಂದು ಹೊಗಳಿದ ಲಲಿತ್ ಮೋದಿ

Pinterest LinkedIn Tumblr

lalith27ನವದೆಹಲಿ: ಆಡಳಿತರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಎರಡನ್ನೂ ವಿವಾದಕ್ಕೆ ಆಹ್ವಾನಿಸಿರುವ ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ, ಈಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿಹೊಗಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಪ್ರಧಾನಿ ಮೋದಿ ಅವರು ಲಲಿತ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲು ಇಂಟರ್‌ಪೊಲ್ ನೆರವು ಪಡೆಯಲು ಮುಂದಾಗಿರುವ ಬೆನ್ನಲ್ಲೇ ಐಪಿಎಲ್ ಮಾಜಿ ಮುಖ್ಯಸ್ಥ ಪ್ರಧಾನಿಯನ್ನು ‘ಅತಿ ಬುದ್ಧಿವಂತ’ ಎಂದು ಹೊಗಳಿದ್ದಾರೆ.

ಈಗಾಗಲೇ ಹಲವು ವಿವಾದಗಳಲ್ಲಿ ಸಿಲುಕಿರುವ ಲಲಿತ್ ಮೋದಿ ಈಗ ಲಂಡನ್‌ನಲ್ಲಿ ಕುಳಿತು ಟ್ವೀಟ್ ಮಾಡುವ ಮೂಲಕ ದಿನಕ್ಕೊಂದು ಹೊಸ ಹೊಸ ವಿವಾದ ಸೃಷ್ಟಿಸುತ್ತಿದ್ದಾರೆ. ನಿನ್ನೆ ಪ್ರಿಯಾಂಕ ಗಾಂಧಿ ಹಾಗೂ ರಾಬರ್ಟ್ ವಾದ್ರಾ ಅವರನ್ನು ಭೇಟಿ ಮಾಡಿದ್ದೆ ಎಂದು ಟ್ವೀಟ್ ಮಾಡಿದ್ದ ಲಲಿತ್ ಮೋದಿ ಇಂದು, ‘ನರೇಂದ್ರ ಮೋದಿ ಬ್ಯಾಟ್ ಮಾಡಿದರೆ, ಚೆಂಡನ್ನು ಬೌಂಡರಿಗೆ ಅಟ್ಟುತ್ತಾರೆ’ ಎಂದು ಟ್ವೀಟ್ ಮಾಡಿದ್ದಾರೆ.

ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ನೀತಿ ಆಯೋಗದ ಸಭೆಗಾಗಿ ದೆಹಲಿಗೆ ತೆರಳಿರುವ ಸಂದರ್ಭದಲ್ಲೇ ಲಲಿತ್ ಈ ರೀತಿ ಟ್ವೀಟ್ ಮಾಡಿದ್ದಾರೆ.

Write A Comment