ರಾಷ್ಟ್ರೀಯ

ಫಾಸ್ಟ್ ಫುಡ್ ಸಂಸ್ಥೆ ಕೆಎಫ್‌ಸಿ ಆಹಾರದಲ್ಲಿ ಅಪಾಯಕಾರಿ ಬ್ಯಾಕ್ಟಿರೀಯಾ ಪತ್ತೆ

Pinterest LinkedIn Tumblr

KFC-Chicken

ಹೈದರಾಬಾದ್: ಮ್ಯಾಗಿ ವಿವಾದದ ನಂತರ ಕಲುಷಿತ ಆಹಾರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಅಮೆರಿಕ ಮೂಲದ ಫಾಸ್ಟ್ ಫುಡ್ ಸಂಸ್ಥೆ ಕೆಎಫ್‌ಸಿಯ ಆಹಾರ ಮಾದರಿಯಲ್ಲಿ ಅಪಾಯಕಾರಿ ಬ್ಯಾಕ್ಟಿರೀಯಾ ಪತ್ತೆಯಾಗಿವೆ.

ಇಲ್ಲಿನ ಕೆಎಫ್‌ಸಿ ಮಳಿಗೆಗಳಿಂದ ಐದು ಮಾದರಿಗಳನ್ನು ತೆಲಂಗಾಣ ರಾಜ್ಯ ಆಹಾರ ಪ್ರಯೋಗಾಲಯ ಪರೀಕ್ಷಿಸಿದ್ದು, ಮಾನವ ತ್ಯಾಜ್ಯದಲ್ಲಿ ಕಂಡು ಬರುವ ಸ್ಯಾಲ್ಮೊನೆಲ್ಲಾ ಮತ್ತು ಇ-ಕೊಲಿಯಂಥ ಅಪಾಯಕಾರಿ ಬ್ಯಾಕ್ಟಿರೀಯಾಗಳು ಪತ್ತೆಯಾಗಿವೆ.

ಕೆಎಫ್‌ಸಿ ನಿರಾಕರಣೆ: ‘ಅದೇ ದಿನ ತಯಾರಾದ, ಆಹಾರ ಪದಾರ್ಥಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕೊಂಡೊಯ್ಯಲಾಗಿತ್ತು, ಎನ್ನಲಾಗಿದೆ. ಆದರೆ, ವರದಿಯನ್ನು ನಿರಾಕರಿಸಿರುವ ಕೆಎಫ್‌ಸಿ ಪರೀಕ್ಷೆಗಾಗಿ ಮಾದರಿಗಳನ್ನು ಕಲೆ ಹಾಕಿರುವ ವಿಷಯವೇ ಗೊತ್ತಿಲ್ಲ,’ ಎಂದಿದೆ.

‘ನೈರ್ಮಲ್ಯಕ್ಕೆ ಹೆಚ್ಚು ಒತ್ತು ನೀಡುವ ಕಂಪನಿ, ಆಹಾರವನ್ನು 170 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ತಯಾರಿಸುತ್ತದೆ. ಆದ್ದರಿಂದ ಆಹಾರ ಪದಾರ್ಥಗಳು ಕೆಡುವ ಸಾಧ್ಯತೆಯೇ ಇಲ್ಲ, ಎಂದ ಕೆಎಫ್‌ಸಿ ಆಹಾರ ಮಾದರಿಗಳನ್ನು ಲ್ಯಾಬ್‌ಗೆ ಒಯ್ಯುವಾಗ ಹೇಗೆ ಸಾಗಿಸಲಾಗಿತ್ತು?,’ ಎಂದು ಪ್ರಶ್ನಿಸಿದೆ.

ಕಲುಷಿತ ಆಹಾರಕ್ಕೆ ಸಂಬಂಧಿಸಿದಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕೆಎಫ್‌ಸಿ, ‘ಕಂಪನಿಯ ಯಾವ ಮಳಿಗೆಯಿಂದ ಮಾದರಿಗಳನ್ನು ಕಳುಹಿಸಲಾಗಿದೆ ಮತ್ತು ಯಾವ ಸ್ಥಿತಿಯಲ್ಲಿ ಅವನ್ನು ಕೊಂಡೊಯ್ಯಲಾಗಿದೆ ಎಂಬ ಬಗ್ಗೆ ಯಾವದೇ ಮಾಹಿತಿ ಇಲ್ಲ. ತಾಜಾವಾಗಿ ತಯಾರಿಸಿದ ಆಹಾರ ಪದಾರ್ಥಗಳಲ್ಲಿ ಯಾವುದೇ ರೀತಿಯ ಬ್ಯಾಕ್ಟೀರಿಯಾಗಳು ಕಾಣಿಸಿಕೊಳ್ಳಲು ಸಾಧ್ಯವೇ ಇಲ್ಲ. ಇದು ಕಂಪನಿಯ ಹೆಸರನ್ನು ಕೆಡಿಸಲು ನಡೆಸಿರುವ ಯತ್ನ. ಈ ಸಂಬಂಧ ಪ್ರಾಧಿಕಾರದಿಂದ ಸ್ಪಷ್ಟೀಕರಣ ಕೇಳಲಿದ್ದೇವೆ,’ ಎಂದಿದೆ.

Write A Comment