ರಾಷ್ಟ್ರೀಯ

ರೈಲು ಪ್ರಯಾಣಿಕರಿಗೆ ಇನ್ನು ಮುಂದೆ ತಲೆಬಿಸಿ ಬೇಡ ! ರೈಲು ರದ್ದಾದರೆ ಪ್ರಯಾಣಿಕರಿಗೆ ಬರುತ್ತೆ ಎಸ್‌ಎಂಎಸ್‌

Pinterest LinkedIn Tumblr

railways-train_650x400_71424949924

ಹೊಸದಿಲ್ಲಿ: ಟಿಕೆಟ್‌ ಕಾಯ್ದಿರಿಸಿದ್ದ ನಿಗದಿತ ರೈಲು ರದ್ದಾದರೆ ಇನ್ನು ಮುಂದೆ ಪ್ರಯಾಣಿಕರಿಗೆ ಎಸ್ಎಂಎಸ್‌ ಬರಲಿದೆ.

‘ಅನಿವಾರ್ಯ ಕಾರಣಗಳಿಂದ ರೈಲು ರದ್ದಾದರೆ ಟೆಕೆಟ್‌ ಕಾಯ್ದಿರಿಸಿದ್ದ ಪ್ರಯಾಣಿಕರಿಗೆ ರೈಲು ರದ್ದಾದ ಬಗ್ಗೆ ಮುಂಚಿತವಾಗಿ ಎಸ್‌ಎಂಎಸ್ ಮೂಲಕ ಮಾಹಿತಿ ನೀಡುವ ಹೊಸ ಪ್ರಯಾಣಿಕ ಸ್ನೇಹಿ ಸೇವೆಯನ್ನು ಆರಂಭಿಸಿದ್ದೇವೆ,’ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

‘ಸದ್ಯ ರೈಲು ಹೊರಡುವ ಸ್ಥಳದಿಂದ ಟಿಕೆಟ್‌ ಕಾಯ್ದಿರಿಸಿರುವ ಪ್ರಯಾಣಿಕರಿಗೆ ಮಾತ್ರ ಎಸ್‌ಎಂಎಸ್‌ ಸೇವೆ ಲಭ್ಯವಾಗಲಿದ್ದು, ಮುಂಬರುವ ದಿನಗಳಲ್ಲಿ ಮಾರ್ಗ ಮಧ್ಯೆ ರೈಲು ಹತ್ತುವ ಪ್ರಯಾಣಿಕರಿಗೂ ಸೇವೆ ವಿಸ್ತರಿಸಲಾಗುವುದು,’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಪ್ರಯಾಣಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಅನುಕೂಲವಾಗುವಂತೆ ರೈಲ್ವೆ ಇಲಾಖೆ ಮುಂಚಿತವಾಗಿ ಪ್ರಯಾಣಿಕರಿಗೆ ಎಸ್ಎಂಎಸ್‌ ಕಳುಹಿಸಲಿದೆ. ಪಿಆರ್‌ಎಸ್‌ ಕೌಂಟರ್‌ ಅಥವಾ ಆನ್‌ಲೈನ್‌ನಲ್ಲಿ ಟಿಕೆಟ್‌ ಕಾಯ್ದಿರಿಸುವ ಸಂದರ್ಭದಲ್ಲಿ ಮೊಬೈಲ್‌ ಸಂಖ್ಯೆ ನಮೂದಿಸಿದ್ದವರಿಗೆ ಮಾತ್ರ ಈ ಸೇವೆ ಲಭ್ಯವಾಗಲಿದೆ,’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Write A Comment