ರಾಷ್ಟ್ರೀಯ

ಮಾಲೇಗಾಂವ್ ಸ್ಫೋಟ: ಆರೋಪಿಗಳ ಮೇಲೆ ಮೃದು ಧೋರಣೆ ಹೊಂದಲು ಎನ್‌ಐಎ ಒತ್ತಾಯ?

Pinterest LinkedIn Tumblr

rohini-salainನವದೆಹಲಿ: ಮೋದಿ ಸರ್ಕಾರ ಅಧಿಕಾರಕ್ಕೆ ಬಂದೊಡನೆ 2008ರ ಮಾಲೇಗಾಂವ್ ಸ್ಫೋಟ ಆರೋಪಿಗಳ ಮೇಲೆ ಮೃದು ಧೋರಣೆ ತಾಳುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನನ್ನ ಮೇಲೆ ಒತ್ತಡ ಹೇರಿತ್ತು ಎಂದು ಪ್ರಸ್ತುತ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಾರ್ವಜನಿಕ ವಿಶೇಷ ನ್ಯಾಯವಾದಿ ರೋಹಿಣಿ ಸಾಲಿಯಾನ್ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಸಾಲಿಯಾನ್, ಕಳೆದ ವರ್ಷ ಎನ್‌ಐಎ ಅಧಿಕಾರಿಯೊಬ್ಬರಿಂದ ನನಗೆ ಕರೆ ಬಂದಿತ್ತು. ಅವರು ಫೋನಲ್ಲಿ ವಿಷಯ ಹೇಳಲು ನಿರಾಕರಿಸಿದ್ದರು. ಅವರು ಬಂದು ಭೇಟಿಯಾಗಿ, ನಿಮಗೊಂದು ಸಂದೇಶವಿದೆ. ಅದೇನು ಅಂದರೆ ಪ್ರಸ್ತುತ ಪ್ರಕರಣದ ಬಗ್ಗೆ ನೀವು ಮೃದು ಧೋರಣೆ ತಾಳಬೇಕು ಎಂದು ಹೇಳಿದರು. ಅದಕ್ಕೆ ನಾನು, ನಾನು ಎಂದಿಗೂ ಕಾನೂನುಪರ ಎಂದು ಉತ್ತರಿಸಿದೆ.

ಜೂನ್ 12ರಂದು ಮಾಲೆಗಾಂವ್ ಪ್ರಕರಣದ ವಿಚಾರಣೆಯ ಮುನ್ನ, ಈ ವಿಚಾರಣೆ ಪ್ರಕ್ರಿಯೆಯಲ್ಲಿ ನಾನು  ಪಾಲ್ಗೊಳ್ಳಬಾರದು, ಅದರ ಬದಲು ಬೇರೆಯಾರನ್ನಾದರೂ ಕಳಿಸಬೇಕೆಂದು ಮೇಲಿಂದ ಆದೇಶ ಬಂದಿದೆ ಎಂದು ಎನ್‌ಐಎ ಅಧಿಕಾರಿಯೊಬ್ಬರು ಹೇಳಿರುವುದಾಗಿ  ಸಾಲಿಯಾನ್ ಆರೋಪಿಸಿದ್ದರು. ಆ ವೇಳೆ ಸಾಲಿಯಾನ್ ಅಧಿಕಾರಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದರು.

ನಾನು ಈ ಪ್ರಕರಣದಲ್ಲಿ ಮೃದು ಧೋರಣೆ ತೋರುವ ಮೂಲಕ ಆರೋಪಿಗಳನ್ನು ರಕ್ಷಿಸಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ ಎಂಬುದು ಇಲ್ಲಿ ಸ್ಪಷ್ಟ ಎಂದು 68ರ ಹರೆಯದ ಸಾಲಿಯಾನ್ ಹೇಳಿದ್ದಾರೆ.

Write A Comment