ರಾಷ್ಟ್ರೀಯ

ಗುಡಿಸಲಲ್ಲಿರುವವರಿಗೆ ಮೂಲಭೂತ ಸೌಕರ್ಯ- ಸೂರು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ: ಪ್ರಧಾನಿ ನರೇಂದ್ರ ಮೋದಿ

Pinterest LinkedIn Tumblr

modi

ನವದೆಹಲಿ, ಜೂ.25: ಇಡೀ ಪ್ರಪಂಚವೇ ಇಂದು ವೇಗವಾಗಿ ಮುನ್ನಡೆಯುತ್ತಿದೆ. ದೇಶದ ಶೇ.40ರಷ್ಟು ಜನರು ನಗರ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ. ದೇಶದ ಹಲವೆಡೆ ಇನ್ನೂ ಹಲವಾರು ಜನರು ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದಾರೆ. ಅವರೆಲ್ಲರಿಗೂ ಮೂಲಭೂತ ಸೌಕರ್ಯ ಹಾಗೂ ಸೂರು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನಗರದ ವಿಜ್ಞಾನ ಭವನದಲ್ಲಿ ಮಹತ್ವಾಕಾಂಕ್ಷೆಯ ಮೂರು ಹೊಸಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಈ ಮೂರು ಯೋಜನೆಗಳು ಕಚೇರಿಯ ಟೇಬಲ್ ಮೇಲೆ ಕುಳಿತು ಸಿದ್ದಪಡಿಸಿದ ಯೋಜನೆಗಳಲ್ಲ. ಎಲ್ಲಾ ಸ್ತರದ ತಜ್ಞರು ಮತ್ತು ಅಧಿಕಾರಿಗಳ ಜೊತೆ ಚರ್ಚಿಸಿ ಈ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಜೊತೆಗೆ ಅಮೂಲಾಗ್ರ ಉಪಾಯದೊಂದಿಗೆ ಈ ಯೋಜನೆಗಳನ್ನು ಜಾರಿಗೆ ತರಲು ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.

ಅಭಿವೃದ್ಧಿಗಾಗಿ ಪ್ರತಿಯೊಂದು ಪಕ್ಷಗಳು ಸ್ಪರ್ಧೆ ನಡೆಸಬೇಕು. ಪ್ರತಿಯೊಬ್ಬ ನಾಗರಿಕನೂ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ನಾವೂ ಕೂಡ ಪ್ರಪಂಚದಲ್ಲಿ ಇತರ ಪ್ರಭಲ ರಾಷ್ಟ್ರಗಳಂತೆ ಶಕ್ತಿಯುತವಾಗಿ ಬೆಳೆಯುತ್ತಿದ್ದೇವೆ ಎಂದ ಪ್ರಧಾನಿ ಮೋದಿ ದೇಶದ ಹಲವೆಡೆ ಜನರು ಗುಡಿಸಲಿನಲ್ಲಿ ವಾಸಿಸುತ್ತಿದ್ದು, ಒಂದು ಹೊತ್ತಿನ ಅನ್ನಕ್ಕೂ ಗತಿಯಿಲ್ಲದಂತಾಗಿದ್ದಾರೆ. 2022ರ ವೇಳೆಗೆ ಪ್ರತಿಯೊಬ್ಬರೂ ಮನೆಯನ್ನು ಹೊಂದಿರಬೇಕು ಇವೆಲ್ಲ ಸಮಸ್ಯೆಗಳ ಪರಿಹಾರ ನಿವಾರಣೆ ಕುರಿತಂತೆ ಜವಾಬ್ದಾರಿಗಳು ಸರ್ಕಾರದ ಮೇಲಿದೆ ಎಂದರು. ದೇಶದ ಆರು ನಗರಗಳು ಹೈಪೈ ಆಗಲಿದ್ದು, ಕರ್ನಾಟಕದ 6 ನಗರಗಳು ಸೇರಿದಂತೆ ದೇಶದ ಪ್ರಮುಖ ನಗರಗಳನ್ನು ಸಕಲ ಸೌಲಭ್ಯಗಳಿಂದ ಸುಸಜ್ಜಿತಗೊಳಿಸಲು ಪ್ರಧಾನಿ ಮೋದಿ ಮೂರು ಯೋಜನೆಗಳಿಗೆ ಚಾಲನೆ ನೀಡಿ ವಾರ್ಷಿಕವಾಗಿ ಪ್ರತಿಯೊಂದು ನಗರಕ್ಕೆ 90 ಕೋಟಿ ರೂ. ಅನುದಾನವನ್ನು ನೀಡಲಾಗುತ್ತದೆ ಎಂದರು. ಉತ್ತರ ಪ್ರದೇಶಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.

Write A Comment