ರಾಷ್ಟ್ರೀಯ

ಐಟಿಸಿ ಕಂಪನಿಯಾ ಸನ್ ಫೀಸ್ಟ್, ಟಾಪ್ ರಾಮನ್, ಸಿಜಿ ಫುಡ್ಸ್ ನೂಡಲ್ಸ್ ಸೇವಿಸಬೇಡಿ…ಇದರಲ್ಲಿ ಮ್ಯಾಗಿಗಿಂತ ಹೆಚ್ಚಿನ ಸೀಸ ಇದೆ; ಪರೀಕ್ಷೆಯಲ್ಲಿ ಸಾಬೀತು

Pinterest LinkedIn Tumblr

nood

ಚೆನ್ನೈ: ಮ್ಯಾಗಿ ನೂಡಲ್ಸ್ ನಲ್ಲಿ ಅನುಮತಿಗಿಂತ ಹೆಚ್ಚಿನ ಪ್ರಮಾಣದ ಸೀಸ ಇದೆ ಎಂದು ಸಾಬೀತಾದ ಮೇಲೆ ದೇಶಾದ್ಯಂತ ನಿಷೇಧಿಸಲಾಯ್ತು. ಆದರೆ ಈಗ ತಿಳಿದು ಬಂದಿರುವ ಮತ್ತೊಂದು ಆಘಾತಕಾರಿ ವಿಷಯ ಎಂದರೆ, ಐಟಿಸಿ ಕಂಪನಿಯಾ ಸನ್ ಫೀಸ್ಟ್, ಟಾಪ್ ರಾಮನ್, ಸಿಜಿ ಫುಡ್ಸ್ ನೂಡಲ್ಸ್ ನಲ್ಲಿ ನೆಸ್ಲ್ಟೆ ಮ್ಯಾಗಿಗಿಂತ ಅತಿ ಹೆಚ್ಚಿನ ಪ್ರಮಾಣದ ಸೀಸ ಇದೆ ಎಂದು ತಮಿಳುನಾಡು ನಡೆಸಿದ ಪರೀಕ್ಷೆಯಲ್ಲಿ ಸಾಬೀತಾಗಿದೆ.

ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ 2.5 ಮಿಲಿಯನ್ ಗೆ ಅನುಮತಿ ನೀಡಿದೆ. ಆದರೆ ಈ ನೂಡಲ್ಸ್ ಗಳಲ್ಲಿ 3.4 ಮಿಲಿಯನ್ ಸೀಸದ ಪ್ರಮಾಣವಿದೆ ಎಂದು ತಿಳಿದು ಬಂದಿದೆ.

ಚೆನ್ನೈ ನ ಕಿಂಗ್ ಇನ್ ಸ್ಟಿಟ್ಯೂಟ್ ಕ್ಯಾಂಪಸ್ ನ ಪ್ರಯೋಗಲಾಯದ ಅಹಾರ ವಿಶ್ಲೇಷಕ ಡಿ.ಕೆ ಜವಹರ್ ಲಾಲ್ , ಈ ಸ್ಯಾಂಪಲ್ ಗಳ ಪ್ರಯೋಗ ನಡೆಸಿದ ನಂತರ ಇವುಗಳ ಟೇಸ್ಟ್ ಮೇಕರ್ ನಲ್ಲಿ ಅತಿ ಹೆಚ್ಚು ಪ್ರಮಾಣದ ಸೀಸದ ಪ್ರಮಾಣವಿದೆ. ಇನ್ನು ಹಲವು ರೀತಿಯ ಪ್ರಯೋಗಗಳು ನಡೆಯಬೇಕಿದೆ ಎಂದು ತಿಳಿಸಿದ್ದಾರೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಆದೇಶದ ಮೇರೆಗೆ, ರುಚಿ ಇಂಟರ್ ನ್ಯಾಷನಲ್ ನ ಕೋಕಾ ಇನಸ್ಟಂಟ್ ನೂಡಲ್ಸ್, ಸಿಡಿ ಫುಡ್ಸ್ ಇಂಡಿಯಾದ ವಾಯ್ ವಾಯ್ ಭುಜಿಯಾ, ಗ್ಲಾಕ್ಸೋಸ್ಮಿತ್ ಕ್ಲೈನ್, ಇಂಡೋ ನಿಸ್ಸಿನ್ ಫುಡ್ ನ ಟಾಪ್ ರಾಮನ್, ಐಟಿಸಿ ಕಂಪನಿಯ ಇನ್ ಸ್ಟಂಟ್ ನೂಡಲ್ಸ್ ಗಳ ಸ್ಯಾಂಪಲ್ ನ ಪರೀಕ್ಷೆ ನಡೆಸಿದಾಗ ಈ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ.

Write A Comment