ರಾಷ್ಟ್ರೀಯ

ಪ್ರಪಾತಕ್ಕುರುಳಿದ ಬಸ್ :15ಮಂದಿ ದುರ್ಮರಣ

Pinterest LinkedIn Tumblr

6390almora-bus-accident-650_650x400_81434794396

ಉತ್ತರಾಖಂಡ್‌ನ‌ ಅಲ್ಮೋರಾ ಎಂಬಲ್ಲಿ ಬಸ್ಸೊಂದು 500 ಮೀಟರ್‌ ಆಳದ ಪ್ರಪಾತಕ್ಕೆ ಉರುಳಿದ ಪರಿಣಾಮ 15 ಮಂದಿ ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ.

ದೆಹಲಿಯಿಂದ ಪಿತೊರ್‌ಘಡಕ್ಕೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಭಾರಿ ಪ್ರಪಾತಕ್ಕೆ ಉರುಳಿತು ಎನ್ನಲಾಗಿದ್ದು ಬಸ್‌ನಲ್ಲಿದ್ದ 15 ಮಂದಿ ಸಾವನ್ನಪ್ಪಿದ್ದು ಇನ್ನುಳಿದ 14 ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಿರಿದಾದ ರಸ್ತೆಯಲ್ಲಿ ಸಾಗುತ್ತಿದ್ದ ಸಮಯದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದ್ದು ಈಗಾಗಲೇ ಸ್ಥಳಕ್ಕೆ ಪೊಲೀಸರು ಆಗಮಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment