ರಾಷ್ಟ್ರೀಯ

ವಿಮಾನದಲ್ಲಿಯೇ ಸಾವನ್ನಪ್ಪಿದ ಪ್ರಯಾಣಿಕ

Pinterest LinkedIn Tumblr

5024Air-India-PTI-L

ವೈದ್ಯಕೀಯ ಚಿಕಿತ್ಸೆಗಾಗಿ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪದಿಂದ ಇಲ್ಲಿಗೆ ಏರ್ ಇಂಡಿಯಾ ವಿಮಾನದಲ್ಲಿ ಬಂದಿದ್ದ 46 ವರ್ಷದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನಡೆದಿದೆ.

ರಾಬರ್ಟ್‌ ಎಂಬುವವರು ತಮ್ಮ ಕುಟುಂಬ ಸದಸ್ಯರೊಂದಿಗೆ ಚಿಕಿತ್ಸೆಗಾಗಿ ವಿಮಾನದಲ್ಲಿ ಬಂದಿದ್ದರು ಎನ್ನಲಾಗಿದ್ದು  ವಿಮಾನವು ನಿಲ್ದಾಣದಲ್ಲಿ ಇಳಿದು ಪ್ರಯಾಣಿಕರು ಇಳಿದು ಬರಲು ಮುಂದಾದರೂ ರಾಬರ್ಟ್‌ ತಮ್ಮ ಸೀಟಿನಲ್ಲೇ ಒರಗಿರುವುದು ಕಂಡು ಬಂತು. ಇದರಿಂದ ಆತಂಕಗೊಂಡ ಕುಟುಂಬ ಸದಸ್ಯರು ವಿಮಾನದ ಚಾಲಕ ಸಿಬ್ಬಂಧಿಗಳಿಗೆ ತಿಳಿಸಿದ್ದು ನಿಲ್ದಾಣದಲ್ಲಿನ ವೈದ್ಯಕೀಯ ತಂಡವನ್ನು ಕರೆಸಿಕೊಂಡು ಪರೀಕ್ಷಿಸಿದಾಗ ರಾಬರ್ಟ್‌ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ರಾಬರ್ಟ್‌ ಸಾವಿನ ಕಾರಣ ಏನೆಂಬುದು ಮರಣೋತ್ತರ ಪರೀಕ್ಷೆಯ ನಂತರ ತಿಳಿದು ಬರಬೇಕಿದ್ದು ಅವರ ಮೃತ ದೇಹವನ್ನು ಮೀನಂಬಾಕ್ಕಂ ಪೊಲೀಸರಿಗೆ ಹಸ್ತಾಂತರಿಸಿದ್ದು ಅವರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment