ರಾಷ್ಟ್ರೀಯ

ರಾಜೀನಾಮೆಗೆ ಆಗ್ರಹಿಸಿ ಸುಷ್ಮಾ ನಿವಾಸದ ಮುಂದೆ ಎಎಪಿ ಪ್ರತಿಭಟನೆ

Pinterest LinkedIn Tumblr

aap-protest-swaraj

ನವದೆಹಲಿ(ಐಎಎನ್ಎಸ್): ಐಪಿಎಲ್‌ ಮಾಜಿ ಮುಖ್ಯಸ್ಥ ಲಲಿತ್‌ ಮೋದಿ ಅವರ ವೀಸಾ ಹಗರಣದಲ್ಲಿ ಭಾಗಿಯಾದ ಆರೋಪಕ್ಕೊಳಗಾಗಿರುವ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ರಾಜೀನಾಮೆಗೆ ಒತ್ತಾಯಿಸಿ ಎಎಪಿಯ 150 ಯುವ ಕಾರ್ಯಕರ್ತರು ಸುಷ್ಮಾ ಅವರ ನಿವಾಸದ ಬಳಿ ಶನಿವಾರ ಪ್ರತಿಭಟನೆ ನಡೆಸಿದರು.

ಎಎಪಿಯ ಯುವ ವಿಭಾಗದ ಅಧ್ಯಕ್ಷ ಅಂಕುಶ್ ಗಾರ್ಗಿ ಅವರ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಳ್ಳಲಾಗಿದ್ದು, ಬೆಳಿಗ್ಗೆ 10ಕ್ಕೆ ಸುಷ್ಮಾ ನಿವಾಸದ ಬಳಿ ಬಂದ ಕಾರ್ಯಕರ್ತರು ಸುಷ್ಮಾ ಅವರ ವಿರುದ್ಧ ಘೋಷಣೆ ಕೂಗಿ, ರಾಜೀನಾಮೆ ನೀಡುವಂತೆ ಆಗ್ರಹಿಸಿದರು.

ಕಾನೂನು ಸುವ್ಯವಸ್ಥೆ ಕಾಪಾಡಲು ಸ್ಥಳದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಪ್ರತಿಭಟನೆ ಶಾಂತಿಯುತವಾಗಿದ್ದು, ಪ್ರತಿಭಟನೆಯನ್ನು ಕೈಬಿಡುವಂತೆ ಅವರ ಮನವೊಲಿಸಲು ಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment