ರಾಷ್ಟ್ರೀಯ

ಐಐಟಿ ಪರೀಕ್ಷೆಯಲ್ಲಿ ಮಕ್ಕಳು ರ್ಯಾಂಕ್ ಬಂದದ್ದಕ್ಕೆ ಇಲ್ಲೊಬ್ಬರು ತಂದೆ ಬೇಸರದಲ್ಲಿದ್ದಾರೆ !

Pinterest LinkedIn Tumblr

IIT-rank

ಪ್ರತಾಪಗಢ, ಜೂ.20: ಸಾಮಾನ್ಯವಾಗಿ ಮಕ್ಕಳು ಚೆನ್ನಾಗಿ ಓದಿ ರ್ಯಾಂ ಕ್ ಗಳಿಸಿದರೆ ನಮಗೆಲ್ಲ ಭಾರೀ ಖುಷಿ. ಎಲ್ಲರೆದುರೂ ಹೇಳಿಕೊಂಡು ಬೀಗುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿಗೆ ತನ್ನಿಬ್ಬರು ಮಕ್ಕಳು ಐಐಟಿ ಪರೀಕ್ಷೆಯಲ್ಲಿ ರ್ಯಾಂ ಕ್ ಬಂದಿರುವುದೇ ಭಾರೀ ಜಿಗುಪ್ಸೆಯಾಗಿಬಿಟ್ಟಿದೆ.

ಅರೇ, ಇದೇನು ಅನ್ನಬೇಡಿ. ಬಡತನ ಸ್ವಾಮಿ… ಬಡತನ. ಐಐಟಿಯಲ್ಲಿ 167 ಹಾಗೂ 410ನೆ ರ್ಯಾಂ ಕ್ ಗಳಿಸಿರುವ ತನ್ನ ಇಬ್ಬರು ಮಕ್ಕಳಾದ 18 ವರ್ಷದ ರಾಜು ಹಾಗೂ 19 ವರ್ಷದ ಬೃಜೇಶ್ ಅವರನ್ನು ಮುಂದಿನ ವಿದ್ಯಾಭ್ಯಾಸಕೆಕ ಹಚ್ಚಲು ಈಗ ಅವರಪ್ಪ ಧರ್ಮರಾಜ್‌ಗೆ ಬರೋಬ್ಬರಿ 1 ಲಕ್ಷ ರೂ. ಬೇಕಾಗಿದೆ. ಅದನ್ನು ತರುವುದೆಲ್ಲಿಂದ..? ಇದು ಧರ್ಮರಾಜ್ ಪ್ರಶ್ನೆ. ಉತ್ತರ ಪ್ರದೇಶದ ಪ್ರತಾಪ್‌ಗಢ ಜಿಲ್ಲೆಯ ರೆಹುನಾ ಲಾಲ್‌ಗಂಜ್‌ನಲ್ಲಿ ವಾಸಿಸುತ್ತಿರುವ ಧರ್ಮರಾಜ್, ಸೂರತ್‌ಮಿಲ್‌ನಲ್ಲಿ ದಿನಗೂಲಿ ಕಾರ್ಮಿಕ. ಮನೆಯಲ್ಲಿರುವ ಏಳು ಜನರ ತುತ್ತಿನ ಚೀಲ ತುಂಬುವುದರಲ್ಲೇ ಸಾಕು ಬೇಕಾಗಿ ಹೋಗುತ್ತದೆ. ಅದೂ ಕೆಲಸಕ್ಕೆ ಹೋದರೆ ಮಾತ್ರ ಅಂದಿನ ಕೂಲಿ. ಇಲ್ಲದಿದ್ದರೆ ಅದೂ ಇಲ್ಲ. ಪರಿಸ್ಥಿತಿ ಹೀಗಿರುವಾಗ ಇನ್ನು ಒಂದು ಲಕ್ಷ ರೂ. ಎಂಬುದು ಧರ್ಮರಾಜ್ ಪಾಲಿಗೆ ಕನ್ನಡಿಯ ಗಂಟೇ ಸರಿ.

ಇಂಥ ಪರಿಸ್ಥಿತಿಯಲ್ಲೂ ನನ್ನ ಮಕ್ಕಖಳ ಸಾಧನೆ ಕೌತುಕವೇ ಆದರೂ ಮುಂದೇನು ಎನ್ನುತ್ತಾನೆ ಧರ್ಮರಾಜ್. ಜೂ.25ರಂದು ಬಂದ ಫಲಿತಾಂಶದಲ್ಲಿ ಮಕ್ಕಳ ರ್ಯಾಂ ಕಿಂಗ್ ಹೊರಬಿದ್ದಿದೆ. ಈಗಾಗಲೇ ಮನೆ ಖರ್ಚು ನಿಭಾಯಿಸಲು ಡಬಲ್ ಶಿಫ್ಟ್‌ನಲ್ಲಿ ದುಡಿಯುತ್ತಿದ್ದೇನೆ. ಆದರೆ ಮುಂದಿನ ಭವಿಷ್ಯ ಮಸುಕಾಗಿದೆ ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ ಧರ್ಮರಾಜ್.

Write A Comment