ರಾಷ್ಟ್ರೀಯ

ಜೈಲಿನಲ್ಲಿದ್ದ ವಿದೇಶಿ ಖೈದಿಯ ಮೇಲೆ ಅತ್ಯಾಚಾರ ನಡೆಸಿದ ಅಧಿಕಾರಿ

Pinterest LinkedIn Tumblr

2960rape-file_2

ಕಾರಾಗೃಹವಾಸ ಶಿಕ್ಷೆ ಅನುಭವಿಸುತ್ತಿದ್ದ ವಿದೇಶಿ ಮಹಿಳೆಯ ಮೇಲೆ ಜೈಲಿನ ಉನ್ನತ ಅಧಿಕಾರಿಯೊಬ್ಬ ಅತ್ಯಾಚಾರವೆಸಗಿದ ಹೇಯ ಘಟನೆ ಲಕ್ನೋದಲ್ಲಿ ನಡೆದಿದೆ.

ಮಹಾರಾಜಾ ಗಂಜ್‌ ಜಿಲ್ಲೆಯ ಕಾರಾಗೃಹವೊಂದರಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಉಜ್ಬೇಕಿಸ್ತಾನ್ ಮೂಲದವಳಾದ ಮಹಿಳೆ ಶಿಕ್ಷೆ ಅನುಭವಿಸುತ್ತಿದ್ದಳು. ಈ ಸಮಯದಲ್ಲಿ ಜೈಲಿನ ಹಿರಿಯ ಅಧಿಕಾರಿ ಧೃವ ನರೈನ್ ಗುಪ್ತಾ ಎಂಬಾತ ಆಕೆಯ ಮೇಲೇ ಅತ್ಯಾಚಾರ ನಡೆಸಿದ್ದಲ್ಲದೇ ಬಿಡುಗಡೆಗಾಗಿ ಹಣ ಕೇಳುತ್ತಿದ್ದ ಎನ್ನಲಾಗಿದೆ.

ಜೈಲಿನ ಅಧಿಕಾರಿ 84 ಸಾವಿರ ರೂಪಾಯಿಗಳ ಬೇಡಿಕೆ ಇಟ್ಟಿದ್ದ ಎನ್ನಲಾಗಿದ್ದು ಅದರಲ್ಲಿ ಅರ್ಧದಷ್ಟು ಹಣವನ್ನು ಅಧಿಕಾರಿ ನೀಡುತ್ತಿದ್ದ ಮಾನಸಿಕ ಹಿಂಸೆ ತಡೆಯಲಾರದೇ ನನ್ನ ಕುಟುಂಬದ ಸದಸ್ಯರಿಗೆ ತಿಳಿಸಿದ್ದೆ. ಅವರು ಹೇಗೋ ಹಣ ಹೊಂದಿಸಿ ಅಧಿಕಾರಿಯ ಅಕೌಂಟ್‌ನಲ್ಲಿ ಜಮಾ ಮಾಡಿದ್ದು ಆದರೂ ಸಹ ಕಿರುಕುಳ ನೀಡುವುದನ್ನು ನಿಲ್ಲಿಸದ ಈತ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಮಹಿಳೆ ನ್ಯಾಯಾಲಯಕ್ಕೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.

ಮಹಿಳೆ ನೀಡಿದ ದೂರಿನ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿಗಳಿರುವ ನ್ಯಾಯಪೀಠ,  ಜೈಲಿನ ಹಿರಿಯ ಅಧಿಕಾರಿ ಧೃವ ನರೈನ್ ಗುಪ್ತಾ ವಿರುದ್ಧ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಆದೇಶ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

Write A Comment