ರಾಷ್ಟ್ರೀಯ

ನೆಸ್ಲೆ ಸಿರ್‌ಲ್ಯಾಕ್‌ನಲ್ಲಿ ಹುಳು, ಫಂಗಸ್ ಪತ್ತೆ

Pinterest LinkedIn Tumblr

3521478

ಕೊಯಮತ್ತೂರು, ಜೂ.17: ಮ್ಯಾಗಿ ನೂಡಲ್ಸ್‌ನ ಕಾರಣದಿಂದ ಈಗಾಗಲೇ ತೊಂದರೆಯಲ್ಲಿರುವ ನೆಸ್ಲೆ ಇಂಡಿಯಾ ಮತ್ತೊಂದು ವಿವಾದದಲ್ಲಿ ಸಿಲುಕಿ ಹಾಕಿಕೊಂಡಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ನೆಸ್ಲೆಯ ಶಿಶು ಆಹಾರ ಉತ್ಪನ್ನ ಸಿರ್‌ಲ್ಯಾಕ್‌ನಲ್ಲಿ ಹುಳುಗಳು ಮತ್ತು ಫಂಗಸ್ ಕಂಡುಬಂದಿದೆ.

ಸಿರೆಲ್ಯಾಕ್‌ನ ಡಬ್ಬವೊಂದರಲ್ಲಿ ಹುಳುಗಳು ಮತ್ತು ಫಂಗಸ್ ಕಂಡುಬಂದಿರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಇನ್ನೊಂದು ವಾರದಲ್ಲಿ ಪರೀಕ್ಷೆಯ ಫಲಿತಾಂಶಗಳು ಲಭಿಸಬಹುದು.

ಕೊಯಮತ್ತೂರಿನ ನಿವಾಸಿ ಶ್ರೀರಾಂ ಎಂಬವರು ಕೆಲವು ದಿನಗಳ ಹಿಂದೆ ಸಿರೆಲ್ಯಾಕ್ ಪ್ಯಾಕ್‌ವೊಂದನ್ನು ಖರೀದಿಸಿ ತಂದಿದ್ದರು. ಪ್ಯಾಕ್‌ನ ಮೇಲೆ 2016ರ ತನಕ ಬಳಕೆ ಮಾಡಬಹುದು ಎಂದು ನಮೂದಿಸಲಾಗಿತ್ತು.

ಸಿರೆಲ್ಯಾಕ್‌ನ ಒಂದು ಪ್ಯಾಕೆಟ್‌ನಲ್ಲಿ ಮಾತ್ರ ಫಂಗಸ್ ಕಂಡು ಬಂದಿದೆಯೇ ಇಲ್ಲವೇ ಉತ್ಪನ್ನದ ಸಂಪೂರ್ಣ ಬ್ಯಾಚ್‌ನಲ್ಲಿ ತೊಂದರೆಗಳಿವೆಯೇ ಎಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ.

Write A Comment