ರಾಷ್ಟ್ರೀಯ

ಸುಷ್ಮಾ ರಾಜೀನಾಮೆ ತಡೆದದ್ದು ಆರ್‌ಎಸ್‌ಎಸ್‌ !

Pinterest LinkedIn Tumblr

sushma

ಹೊಸದಿಲ್ಲಿ: ಐಪಿಎಲ್ ಫಿಕ್ಸಿಂಗ್ ಹಗರಣದ ಪ್ರಮುಖ ಆರೋಪಿ ಲಲಿತ್ ಮೋದಿ ಪ್ರಯಾಣ ದಾಖಲೆ ವಿವಾದ ಹೊರಬೀಳುವ ವಾರದ ಮೊದಲೇ ವಿದೇಶ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ರಾಜೀನಾಮೆ ನೀಡಲು ಮುಂದಾಗಿದ್ದರು. ಆರ್‌ಎಸ್‌ಎಸ್‌ ಮಧ್ಯಪ್ರವೇಶದಿಂದ ಅದಕ್ಕೆ ತಡೆ ಬಿತ್ತು ಎಂದಿವೆ ಮೂಲಗಳು.

ಲಲಿತ್‌ ಮೋದಿ ಪ್ರಯಾಣ ದಾಖಲೆಗೆ ಸಂಬಂಧಿಸಿದಂತೆ ಅವರ ಪ್ರತಿಕ್ರಿಯೆ ಕೋರಿ ಬ್ರಿಟಿಷ್‌ ಸಂಸದ ಸುಷ್ಮಾ ಅವರಿಗೆ ವಾರದ ಮೊದಲೇ ಇಮೇಲ್‌ ಕಳುಹಿಸಿದ್ದರು. ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಸುಷ್ಮಾ, ಇಡೀ ವಿಷಯದ ಬಗ್ಗೆ ವಿವರಣೆ ನೀಡಿದ್ದರು ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ವಿಚಾರವಾಗಿ ಮುಂದಿನ ಕಾರ್ಯತಂತ್ರ ರೂಪಿಸಲು ಪ್ರಧಾನಿ ಮೋದಿ ಮರು ದಿನವೇ ಬಿಜೆಪಿ ನಾಯಕರು ಹಾಗೂ ಆರ್‌ಎಸ್ಎಸ್‌ ಪದಾಧಿಕಾರಿಗಳ ಸಭೆ ಕರೆದಿದ್ದರು. ಪ್ರಕರಣ ಸಂಬಂಧ ಸುಷ್ಮಾ ಅವರ ನಿಲುವನ್ನು ಸಭೆಯಲ್ಲಿ ಸ್ಪಷ್ಟಪಡಿಸಲಾಗಿತ್ತು. ಸರಕಾರಕ್ಕೆ ಮುಜುಗರವಾಗುದನ್ನು ತಪ್ಪಿಸಲು ರಾಜೀನಾಮೆ ನೀಡಲು ಸಿದ್ಧ ಎಂದು ಸುಷ್ಮಾ ತಿಳಿಸಿದ್ದರು. ಆದರೆ, ಅವರ ಬೆಂಬಲಕ್ಕೆ ನಿಂತ ಆರ್‌ಎಸ್ಎಸ್ ಪದಾಧಿಕಾರಿಗಳು, ಅವರನ್ನು ತಡೆದರು ಎಂದು ತಿಳಿದುಬಂದಿದೆ. ಬ್ರಿಟಿಷ್‌ ಪತ್ರಿಕೆಯಲ್ಲಿ ಮೊದಲು ವಿವಾದ ಬಯಲಾಗಿದ್ದು, ಭಾನುವಾರದ ನಂತರ ದೇಶದ ಸುದ್ದಿ ಚಾನೆಲ್‌ಗಳಲ್ಲಿ ವಿವಾದ ದೊಡ್ಡದಾಗಿದೆ.

Write A Comment