ಅಂತರಾಷ್ಟ್ರೀಯ

ಅಮೆರಿಕದಲ್ಲಿ ಬೆಂಗಳೂರು ವೈದ್ಯ ಸುರೇಶ್‌ ಗಡಸಲ್ಲಿ ಹತ್ಯೆ

Pinterest LinkedIn Tumblr

shootout

ಹ್ಯೂಸ್ಟನ್: ಬೆಂಗಳೂರು ಮೂಲದ ಖ್ಯಾತ ಹೃದಯ ತಜ್ಞ ಸುರೇಶ್ ಗಡಸಲ್ಲಿ (53) ಅವರನ್ನು ಅವರ ಗೆಳೆಯ ಹಾಗೂ ಉದ್ಯಮ ಸಹ ಪಾಲುದಾರನೇ ಗುಂಡು ಹೊಡೆದು ಕೊಂದಿರುವ ಘಟನೆ ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದಿದೆ.
ತಮಿಳುನಾಡಿನ ಅಯ್ಯಸಾಮಿ ತಗಂ (60), ಗಡಸಲ್ಲಿ ಅವರಿಗೆ ಗುಂಡು ಹೊಡೆದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಜಗತ್ತಿನಲ್ಲೇ ಮೊದಲ ಬಾರಿಗೆ ಹೃದಯಕ್ಕೆ ಹೈಬ್ರಿಡ್ ರಿವಾಸ್ಕ್ಯೂಲೈರೇಸೇಷನ್ (ರಕ್ತ ಪರಿಚಲನೆ ನಿಂತು ಹೋಗಿರುವ ದೇಹದ ಅಂಗ ಅಥವಾ ಭಾಗದ ರಕ್ತ ಸಂಚಾರವನ್ನು ಮರು ಆರಂಭಿಸುವ ಚಿಕಿತ್ಸೆ) ಚಿಕಿತ್ಸೆ ನೀಡಿ ವಿಶ್ವಖ್ಯಾತಿಯಾಗಿದ್ದ ವೈದ್ಯ ಗಡಸಲ್ಲಿ ಅವರು ಬೆಳಗಾವಿಯ ಜವಾಹರಲಾಲ್ ನೆಹರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಕಲಿತಿದ್ದರು. ಬಳಿಕ ಅವರು ವಿಸ್ಕಾನ್‌ಸಿನ್ ವಿವಿಯ ಇಂಟರ್ನಲ್ ಮೆಡಿಸಿನ್ ಮತ್ತು ಕಾರ್ಡಿಯಾಲಜಿ ವಿಭಾಗದಲ್ಲಿ ಪದವಿ ಪಡೆದಿದ್ದರು. 1994ರಿಂದ ಟೆಕ್ಸಾಸ್‌ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.

Write A Comment