ರಾಷ್ಟ್ರೀಯ

ಅಲಹಾಬಾದ್: ಜಾಗ್ವಾರ್ ಯುದ್ಧ ವಿಮಾನ ಅಪಘಾತ

Pinterest LinkedIn Tumblr

IAF-Jaguar

ಅಲಹಾಬಾದ್(ಪಿಟಿಐ): ಉತ್ತರಪ್ರದೇಶದ ಅಲಹಾಬಾದ್ ಸಮೀಪ ಸೋಮವಾರ ಬೆಳಿಗ್ಗೆ ಭಾರತೀಯ ವಾಯು ಪಡೆಯ ‘ಜಾಗ್ವಾರ್’ ಯುದ್ಧ ವಿಮಾನ ಅಪಘಾತಕ್ಕೀಡಾಗಿದೆ. ಪ್ರಸಕ್ತ ವರ್ಷದಲ್ಲಿ ನಡೆದ ‘ಜಾಗ್ವಾರ್’ ಯುದ್ಧ ವಿಮಾನಗಳ ಎರಡನೇ ಅಪಘಾತ ಇದಾಗಿದೆ.

ವಿಮಾನದಲ್ಲಿದ್ದ ಇಬ್ಬರು ಪೈಲಟ್ ಗಳು ಅಪಾಯದಿಂದ ಪಾರಾಗಿದ್ದಾರೆ. ಅವರಿಗಾಗಿ ಹುಡುಕಾಟ ನಡೆದಿದೆ ಎಂದು ವಾಯು ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಯುದ್ಧ ವಿಮಾನ ಅಲಹಾಬಾದ್ ವಾಯು ನೆಲೆಯಿಂದ ಬೆಳಿಗ್ಗೆ 7.25ಕ್ಕೆ ಹೊರಟಿತ್ತು. ಇಲ್ಲಿಂದ 18 ಕಿ.ಮೀ. ದೂರದಲ್ಲಿ 8.47ಕ್ಕೆ ವಿಮಾನ ಅಪಘಾತಕ್ಕಿಡಾಗಿದೆ. ಈ ಕುರಿತು ತನಿಖೆಗೆ ಸೂಚಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಇದೇ ವರ್ಷ ಮಾರ್ಚ್ ನಲ್ಲಿ ಹರಿಯಾಣದ ಶಹಾಬಾದ್ ನಗರದ ಹೊರ ವಲಯದ ಕೃಷಿ ಭೂಮಿಯಲ್ಲಿ ಅಪ್ಪಳಿಸುವ ಮೂಲಕ ‘ಜಾಗ್ವಾರ್’ ಯುದ್ಧ ವಿಮಾನ ಅಪಘಾತಕ್ಕೀಡಾಗಿತ್ತು. ಈ ಘಟನೆಯಲ್ಲಿ ಇಬ್ಬರು ಪೈಲಟ್ ಗಳು ಅಪಾಯದಿಂದ ಪಾರಾಗಿದ್ದರು.

Write A Comment