ರಾಷ್ಟ್ರೀಯ

ಗ್ಲೂಕಾನ್ ಡಿ ನಲ್ಲಿ ಹುಳು ! : ಎನರ್ಜಿ ಡ್ರಿಂಕ್ಸ್ ಗೂ ಬಂತು ಕಂಟಕ

Pinterest LinkedIn Tumblr

Glucon-d

ಬುಲಂದರ್‌ಷಹಾರ್, ಜೂ.9- ಇಡೀ ದೇಶದಲ್ಲಿ ಭಾರೀ ಸಂಚಲನ ಮೂಡಿಸಿದ ಮ್ಯಾಗಿ  ನ್ಯೂಡಲ್ಸ್ ವಿವಾದ ಹೊತ್ತಿ ಉರಿಯುತ್ತಿರುವಾಗಲೇ ಎನರ್ಜಿ ಡ್ರಿಂಕ್ ಗ್ಲೂಕಾನ್  ಡಿನಲ್ಲಿ ಸಣ್ಣ ಪುಟ್ಟ ಹುಳುಗಳು ಮತ್ತು ಕೀಟಗಳು ಕಂಡು ಬರುತ್ತಿವೆ ಎಂಬುದು ಉತ್ತರಪ್ರದೇಶದ ನಾಗರೀಕರ ಆರೋಪ..

ಈ ಹಿನ್ನೆಲೆಯಲ್ಲಿ ಗ್ಲೂಕಾನ್  ಡಿ ಅಂಶವನ್ನು ಪ್ರಯೋಗಕ್ಕೆ ಕಳುಹಿಸಲಾಗಿದ್ದು ವರದಿ ನಂತರ ಮುಂದಿನ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಇಲ್ಲಿನ ನಿವಾಸಿ ಬಟ್ಟು ಎಂಬಾತ ಅಂಗಡಿಯೊಂದರಲ್ಲಿ ಖರೀದಿಸಿದ್ದ ಗ್ಲೂಕಾನ್  ಡಿ ಅನ್ನು ಕುಟುಂಬದವರು ಸೇವಿಸಿದ ನಂತರ ವಾಂತಿ ಬೇಧಿ ಉಂಟಾಗಿ ಆಸ್ಪತ್ರೆ ಪಾಲಾಗಿದ್ದರು.

ಈ ಹಿನ್ನೆಲೆಯಲ್ಲಿ ಬಟ್ಟು ಖರೀದಿಸಿದ ಅಂಗಡಿಯಲ್ಲಿನ ಗ್ಲೂಕಾನ್  ಡಿ ಪ್ಯಾಕೆಟ್‌ಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಚಿಸಿದಾಗ ಹುಳು ಮತ್ತು ಕೀಟಗಳು ಇರುವುದು ಪತ್ತೆಯಾಗಿದೆ. ಗ್ಲೂಕಾನ್  ಡಿ ಅನ್ನು ಅಮೆರಿಕದ ಫಾರ್ಮದಸ್ಯೂಟಿಕಲ್ ಕಂಪನಿಯೊಂದು ತಯಾರಿಸುತ್ತಿದ್ದು ಇದೀಗ ಈ ಪ್ರಕರಣದ ನಂತರ ಎಲ್ಲರ ಗಮನ ಸೆಳೆದಿದೆ.

Write A Comment