ರಾಷ್ಟ್ರೀಯ

ಮಹಿಳೆಯರಿಗಾಗಿ ಮಹಿಳೆಯರಿಂದಲೇ ಚಲಾಯಿಸಲ್ಪಡುವ ‘ಪಿಂಕ್ ಆಟೋ’

Pinterest LinkedIn Tumblr

bhrauto4_pink

ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರಿಗಾಗಿ ಮಹಿಳೆಯರಿಂದಲೇ ಚಲಾಯಿಸಲ್ಪಡುವ ‘ಪಿಂಕ್ ಆಟೋ’ ಗಳನ್ನು ಆರಂಭಿಸಲು ಇಂದೋರ್ ಜಿಲ್ಲಾಡಳಿತ ತೀರ್ಮಾನಿಸಿದೆ.

ಮೊದಲ ಹಂತವಾಗಿ 20 ‘ಪಿಂಕ್ ಆಟೋ’ ಗಳು ರಸ್ತೆಗಿಳಿಯಲಿದ್ದು, ಇವುಗಳನ್ನು ಚಲಾಯಿಸಲು ಹಲವಾರು ಮಹಿಳೆಯರು ಮುಂದೆ ಬಂದಿದ್ದಾರೆ. ಇವರುಗಳಿಗೆ ಸೂಕ್ತ ತರಬೇತಿ ನೀಡಿ ಬಳಿಕ ಈ ಸೇವೆಯನ್ನು ಆರಂಭಿಸಲಾಗುವುದು ಎಂದು ಇಂದೋರ್ ಜಿಲ್ಲಾಡಳಿತ ತಿಳಿಸಿದೆ.

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಈ ಸೇವೆಯಿಂದ ಅನುಕೂಲವಾಗಲಿದೆ ಎಂದು ತಿಳಿಸಿರುವ ಇಂದೋರ್ ಜಿಲ್ಲಾಡಳಿತದ ವಕ್ತಾರರು, ಮೊಬೈಲ್ ಕರೆ ಮಾಡುವ ಮೂಲಕ ಅಥವಾ ‘ಪಿಂಕ್ ಆಟೋ’ ಸೇವೆಗಾಗಿಯೇ ಸಿದ್ದಪಡಿಸುವ ಅಪ್ಲಿಕೇಶನ್ ಮೂಲಕ ಈ ಆಟೋಗಳನ್ನು ಬುಕ್ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ. ಮಾಮೂಲಿ ಆಟೋಗಳಿಗೆ ಹೋಲಿಸಿದರೆ ದರವನ್ನೂ ಕಡಿಮೆ ಮಾಡಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.

Write A Comment