ರಾಷ್ಟ್ರೀಯ

ಮದುವೆಯಾಗಿ ಗಂಡನ ಮನಗೆ ಬರುತ್ತಿದ್ದಂತೆ ಮದುಮಗಳು ಮಗುವಿಗೆ ಜನ್ಮ ನೀಡಿದ ಘಟನೆ

Pinterest LinkedIn Tumblr

fisrt

ಕಾನ್ಪುರ್: ಮದುವೆಯಾಗಿ ಗಂಡನ ಮನಗೆ ಬರುತ್ತಿದ್ದಂತೆ ಮದುಮಗಳು ಮಗುವಿಗೆ ಜನ್ಮ ನೀಡಿದ ಘಟನೆ ಕಾನ್ಪುರದಲ್ಲಿ ನಡೆದಿದೆ. ಇದರಿಂದ ಆಘಾತಕ್ಕೊಳಗಾದ ಯುವತಿಯ ಗಂಡನ ಮನೆಯವರು ಆಕೆಯನ್ನು ಮದುವೆಯನ್ನು ಮುರಿದುಕೊಂಡಿದ್ದಾರೆ.

ದೇರಾಲ್ಪುರ ಪೊಲೀಸ್ ಠಾಣಾ ವ್ಯಾಪ್ತಿಯಡಿ ಬರುವ ಕಾನ್ಪುರದ ಸಬ್ದಾಲ್ಪುರ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಮದುವೆ ಶಾಸ್ತ್ರ ಮುಗಿಸಿ ದಿಬ್ಬಣ ವರನ ಮನೆಯನ್ನು ತಲುಪಿತ್ತು. ನವಜೋಡಿಗಳ ಪ್ರಥಮ ರಾತ್ರಿಗೆ ಕೋಣೆಯನ್ನು ಸಿಂಗರಿಸಲಾಗಿತ್ತು. ಅಷ್ಟರಲ್ಲಿ  ವಧುವಿಗೆ ಪ್ರಸವ ವೇದನೆ ಪ್ರಾರಂಭವಾಗಿದೆ. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿಯೇ ಅವಳು ಮಗುವಿಗೆ ಜನ್ಮ ನೀಡಿದ್ದಾಳೆ. ಹಠಾತ್ ನಡೆದ ಈ ಘಟನೆ ವಧುವಿನ ಕಡೆಯವರಿಗೆ ಇರಿಸುಮುರಿಸು ತಂದಿದೆ. ಆದರೆ ಘಟನೆಯಿಂದ ಕ್ರೋಧಿತರಾದ ವರನ ಕಡೆಯವರು ವಧುವಿನ ಕಡೆಯವರನ್ನು ತರಾಟೆಗೆ ತೆಗೆದುಕೊಂಡರು.

ನಂತರ ಈ ಪ್ರಕರಣ ಪಂಚಾಯತ್ ಮುಂದೆ ಹೋಯಿತು. ಗ್ರಾಮದ ಮುಖಂಡರ ನಿರ್ಣಯದ ಮೇರೆಗೆ  ತಿಲಕ್ ಕಾರ್ಯಕ್ರಮದ ವೇಳೆ ವಿನಿಮಯ ಮಾಡಿಕೊಂಡಿದ್ದ ವಸ್ತುಗಳನ್ನು  ವಧುವಿನ ಕಡೆಯವರು ಹಿಂತಿರುಗಿಸಿದರು ಮತ್ತು ಮಗುವಿನ ಸಮೇತ ಮಗಳನ್ನು ಹಿಂತಿರುಗಿ ಮನೆಗೆ ಕರೆದೊಯ್ದರು.

Write A Comment