ರಾಷ್ಟ್ರೀಯ

ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವತಿಗೆ ಅಮಲು ಪದಾರ್ಥ ತಿನ್ನಿಸಿ ಅತ್ಯಾಚಾರ

Pinterest LinkedIn Tumblr

2005raped-and-murdered-300x202

ಬಸ್ ನಿಲ್ದಾಣದಲ್ಲಿ ನಿಂತಿದ್ದ 21 ವರ್ಷದ ಯುವತಿಗೆ ‘ಮತ್ತು’ ಬರುವ ಪದಾರ್ಥವನ್ನು ತಿನ್ನಿಸಿ ಅತ್ಯಾಚಾರ ನಡೆಸಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಮುಜಾಫರ್ ನಗರದ ಸಿವಿಲ್‌ ಲೈನ್ಸ್‌ನಲ್ಲಿರುವ ನಗರ ಸಾರಿಗೆಯ ಬಸ್‌ ನಿಲ್ದಾಣವೊಂದರಲ್ಲಿ ಈ ಘಟನೆ ನಡೆದಿದ್ದು ಯುವತಿಗೆ ಪರಿಚಯದವನೇ  ಆದ ಯುವಕನೊಬ್ಬ ಅಮಲು ಬರುವ ಪದಾರ್ತವನ್ನು ತಿನ್ನಿಸಿ ಬಸ್ ನಿಲ್ದಾಣದಲ್ಲಿನ ನಿರ್ಜನ ಪದೇಶಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ.

ಈ ಕುರಿತು ಸಂತ್ರಸ್ತ ಯುವತಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಮುಕ ಅಂಕಿತ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment