ರಾಷ್ಟ್ರೀಯ

ಅತ್ಯಾಚಾರ ಸಂತ್ರಸ್ತೆಯರ ಪರೀಕ್ಷೆ; ‘ಟೂ ಫಿಂಗರ್ ಟೆಸ್ಟ್’ ವಿವಾದಾತ್ಮಕ ಅದೇಶವನ್ನು ಮರಳಿ ಪಡೆದ ದೆಹಲಿ ಸರ್ಕಾರ

Pinterest LinkedIn Tumblr

424sexual-harassment-main1

ಅತ್ಯಾಚಾರ ಸಂತ್ರಸ್ತೆಯರ ಪರೀಕ್ಷೆ ಸಂದರ್ಭದಲ್ಲಿ ಬಳಸುತ್ತಿದ್ದ ‘ಟೂ ಫಿಂಗರ್ ಟೆಸ್ಟ್’ ಬಗೆಗಿನ ವಿವಾದಾತ್ಮಕ ಸುತ್ತೋಲೆಯನ್ನು ಹಿಂಪಡೆಯುವ ಮೂಲಕ ಮಹಿಳಾ ಹಕ್ಕು ಹೋರಾಟಗಾರರ ಪ್ರತಿಭಟನೆಗೆ ದೆಹಲಿ ಸರ್ಕಾರ ಅಂತೂ ಮಣಿದಿದೆ.

ಈ ಪರೀಕ್ಷಾ ವಿಧಾನ ಮಹಿಳೆಯರ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು 2013 ರಲ್ಲಿ ಸುಪ್ರಿಂಕೋರ್ಟ್ ಹೇಳಿತ್ತು. ಅಲ್ಲದೇ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಇದಕ್ಕಿಂತ ಉತ್ತಮವಾದ ಬೇರೆ ವಿಧಾನವನ್ನು ಅಳವಡಿಸುವಂತೆ ಸುಪ್ರೀಂ ಸೂಚನೆ ನೀಡಿತ್ತು.

ಆದರೆ ಈ ನಡುವೆ ಮೇ 31 ರಂದು ಸುತ್ತೋಲೆಯೊಂದನ್ನು  ಹೊರಡಿಸಿದ್ದ ದೆಹಲಿ ಸರ್ಕಾರ ಕೆಲವೊಂದು ಸಂದರ್ಭಗಳಲ್ಲಿ ಈ ವಿಧಾನ ಅನುಸರಿಸುವುದು ಅನಿವಾರ್ಯ.ಇದರಲ್ಲಿ ಮಹಿಳೆಯರನ್ನು ಸಂದಿಗ್ಧ ಪರಿಸ್ಥಿತಿಗೆ ಈಡು ಮಾಡುವ ಉದ್ದೇಶವಿಲ್ಲ ಎಂದು ತಿಳಿಸಿತ್ತು.ಅಲ್ಲದೇ ಸಂತ್ರಸ್ತೆಗೆ ಅನ್ಯಾಯ ತಪ್ಪಿಸಲು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಈ ಮಾದರಿಯ ಪರೀಕ್ಷೆ ಅಗತ್ಯವಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.

ಮಹಿಳೆಗೆ ನ್ಯಾಯ ದೊರಕಿಸುವುದು ನಮ್ಮ ಉದ್ದೇಶ  ಹೊರತು ಇದರಲ್ಲಿ ಮಾತ್ತಾವುದೇ ಉದ್ದೇಶವಿಲ್ಲ ಎಂದು ತಿಳಿಸಿದ್ದ ಸರ್ಕಾರ ಈ ವಿಧಾನದ ಪರೀಕ್ಷೆ ಮಾಡುವ ಸಂದರ್ಭದಲ್ಲಿ ಸಂತ್ರಸ್ತೆಗೆ ಮಾಹಿತಿ ನೀಡಿ ಅವರಿಂದ ಒಪ್ಪಿಗೆ ಪಡೆದ ನಂತರವಷ್ಟೇ ಈ ರೀತಿಯ ಪರೀಕ್ಷೆಗೆ ಅವಕಾಶ ನೀಡುತ್ತೇವೆ ಎಂದು ವಿವರಿಸಿತ್ತು.

Write A Comment