ರಾಷ್ಟ್ರೀಯ

ಆಪರೇಷನ್ ಬ್ಲೂ ಸ್ಟಾರ್ ವಾರ್ಷಿಕೋತ್ಸವದ ವೇಳೆ ಘರ್ಷಣೆ: ಆರು ಮಂದಿಗೆ ಗಾಯ

Pinterest LinkedIn Tumblr

swarna-mandir

ಅಮೃತಸರ್:  ಭಾರತೀಯ ಸೇನೆಯ ಆಪರೇಷನ್ ಬ್ಲೂ ಸ್ಟಾರ್ ನ 31 ನೇ ವಾರ್ಷಿಕೋತ್ಸವದ ವೇಳೆ ನಡೆದ ಘರ್ಷಣೆಯಲ್ಲಿ ಆರು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಅಮತಸರದ ಸ್ವರ್ಣ ದೇಗಲುದ ಬಳಿ ನಡೆದಿದೆ.

ಸ್ವರ್ಣ ದೇಗುಲದ ಬಳಿ ಕೆಲವು ಕಿಡಿಗೇಡಿಗಳು ಖಲಿಸ್ತಾನ್ ಜಿಂದಾಬಾದ್ ಎಂಬ ಘೋಷಮೆ ಕೂಗಿದ್ದರಿಂದ ಪರಿಸ್ಥಿತಿ ಉದ್ವಿಘ್ನಗೊಂಡು, ಸಿಖ್ ಮೂಲಭೂತವಾದಿಗಳು ಹಾಗೂ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ ಸದಸ್ಯರ ನಡುವೆ ಉಂಟಾದ ಘರ್ಷಣೆಯಲ್ಲಿ ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಸುಮಾರು 15 ರಿಂದ 25 ಮಂದಿ ಯುವಕರಿದ್ದ ತಂಡ ಸ್ವರ್ಣ ಮಂದಿರದ ಬಳಿ ಖಲಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿತು. ಈ ವೇಳೆ  ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ ಸದಸ್ಯರ ನಡುವೆ ಉಂಟಾದ ಘರ್ಷಣೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಜಿತೆಂದರ್ ಸಿಂಗ್ ಆಲೂಕ್ ತಿಳಿಸಿದ್ದಾರೆ.

ವಾರ್ಷಿಕೋತ್ಸವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಬಿಗಿ ಪೋಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು ಎಂದು ಅವರು ಹೇಳಿದ್ದಾರೆ.

Write A Comment